ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪನೆಗೆ ಮನವಿ

758

ಸಿಂದಗಿ: ತಾಲೂಕಿನಲ್ಲಿ ವಾಹನ ನೋಂದಣಿ ಸಂಖ್ಯೆ ಆಗ್ತಿದ್ದು, ಪಟ್ಟಣದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಸ್ಥಾಪಿಸುವಂತೆ ಮಾಜಿ ಸಚಿವ ಹಾಗೂ ಶಾಸಕ ಎಂ.ಸಿ ಮನಗೂಳಿ ಅವರು ಆಯುಕ್ತರಿಗೆ ಪತ್ರ ಬರೆಯಲಾಗಿದೆ.

ಏಪ್ರಿಲ್ 2018ರಿಂದ ಫೆಬ್ರವರಿ 2019 ಅಂತ್ಯದ ವೇಳೆಗೆ 4,671 ವಾಹನಗಳು ನೋಂದಣಿಯಾಗಿದೆ. ಅಲ್ದೇ, ದೇವರಹಿಪ್ಪರಗಿ ಹಾಗೂ ಆಲಮೇಲ ಪ್ರತ್ಯೇಕ ತಾಲೂಕುಗಳಾಗಿವೆ. ಹೀಗಾಗಿ ಸಿಂದಗಿ, ಇಂಡಿ, ದೇವರಹಿಪ್ಪರಗಿ ಹಾಗೂ ಆಲಮೇಲ ಸೇರಿಸಿಕೊಂಡು ಪಟ್ಟಣದಲ್ಲಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಮಂಜೂರು ಮಾಡಬೇಕೆಂದು ಕೇಳಿಕೊಳ್ಳಲಾಗಿದೆ.

ಸಿಎಂ ಬಿಎಸ್ವೈ, ಸಾರಿಗೆ ಸಚಿವ ಲಕ್ಷ್ಮಣ ಸವದಿ ಹಾಗೂ ಸಾರಿಗೆ ಆಯುಕ್ತರಿಗೆ, ಬೆಳಗಾವಿ ಹಾಗೂ ವಿಜಯಪುರ ಪ್ರಾದೇಶಿಕ ಅಧಿಕಾರಿಗಳ ವರದಿ ಆಧಾರದ ಮೇಲೆ ಸಿಂದಗಿ, ದೇವರಹಿಪ್ಪರಗಿ, ಆಲಮೇಲ, ಇಂಡಿಯನ್ನ ಒಳಗೂಡಿಸಿ ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿ ಮಂಜೂರು ಮಾಡಲು 10/10/19ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದು ಮಂಜೂರಿ ಹಂತದಲ್ಲಿದೆ. ಇದನ್ನ ಸೂಕ್ತವಾಗಿ ಪರಿಗಣಿಸಿ ಬೇಡಿಕೆಗೆ ಸ್ಪಂದಿಸಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.




Leave a Reply

Your email address will not be published. Required fields are marked *

error: Content is protected !!