ಬಿಜಪಿ 54, ಕಾಂಗ್ರೆಸ್ 46, ಜೆಡಿಎಸ್ 14 ಕ್ಷೇತ್ರಗಳಲ್ಲಿ ಮುನ್ನಡೆ

107

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶುರುವಾಗಿದೆ. ಈಗಾಗ್ಲೇ ಮತ ಎಣಿಕೆ ಶುರುವಾಗಿದ್ದು, 138 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ 41, ಕಾಂಗ್ರೆಸ್ 32, ಜೆಡಿಎಸ್ 9 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ವರುಣಾದಲ್ಲಿ ಕಾಂಗ್ರೆಸ್ ಸಿದ್ದರಾಮಯ್ಯ, ಬಿಜೆಪಿಯ ಶಿಗ್ಗಾಂವಿಯಲ್ಲಿ ಬೊಮ್ಮಾಯಿ, ಕನಕಪುರದಲ್ಲಿ ಕಾಂಗ್ರೆಸ್ ಡಿ.ಕೆ ಶಿವಕುಮಾರ್, ಚನ್ನರಾಯಪಟ್ಟಣದಲ್ಲಿ ಜೆಡಿಎಸ್ ಹೆಚ್.ಡಿ ಕುಮಾರಸ್ವಾಮಿ, ಜೆಡಿಎಸ್ ರಾಮನಗರದಲ್ಲಿ ನಿಖಿಲ್ ಕುಮಾರಸ್ವಾಮಿ, ಪದ್ಮನಾಭ ನಗರದಲ್ಲಿ ಬಿಜೆಪಿಯ ಆರ್.ಅಶೋಕ್, ವಿಜಪುರದಲ್ಲಿ ಬಿಜೆಪಿಯ ಯತ್ನಾಳ, ಬಸವನ ಬಾಗೇವಾಡಿಯಲ್ಲಿ ಕಾಂಗ್ರೆಸ್ ಶಿವಾನಂದ ಪಾಟೀಲ, ಸಿಂದಗಿಯಲ್ಲಿ ಬಿಜೆಪಿ ರಮೇಶ ಭೂಸನೂರ, ಇಂಡಿಯಲ್ಲಿ ಕಾಂಗ್ರೆಸ್ ಯಶವಂತರಾಯಗೌಡ, ದೇವರ ಹಿಪ್ಪರಗಿಯಲ್ಲಿ ಜೆಡಿಎಸ್ ನ ರಾಜುಗೌಡ, ಬಬಲೇಶ್ವರದಲ್ಲಿ ಎಂ.ಬಿ ಪಾಟೀಲ ಮುನ್ನಡೆ ಇದ್ದಾರೆ.

ಮುಧೋಳದಲ್ಲಿ ಬಿಜೆಪಿಯ ಗೋವಿಂದ ಕಾರಜೋಳ, ಬಿಜೆಪಿಯ ಬೀಳಗಿಯಲ್ಲಿ ಮುರುಗೇಶ ನಿರಾಣಿ, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕಾಂಗ್ರೆಸ್ ಜಗದೀಶ್ ಶೆಟ್ಟರ್, ತೆರದಾಳ ಬಿಜೆಪಿಯ ಸಿದ್ದು ಸವದಿ, ಹೊಸಕೋಟೆಯಲ್ಲಿ ಬಿಜೆಪಿ ಎಂಟಿಬಿ ನಾಗರಾಜ, ಹಾಸನದಲ್ಲಿ ಕಾಂಗ್ರೆಸ್ ನ ಪ್ರೀತಂ ಗೌಡ, ಶ್ರೀನಿವಾಸಪುರದಲ್ಲಿ ಜೆಡಿಎಸ್ ನ  ವೆಂಕಟೇಶ ಶಿವಾರೆಡ್ಡಿ, ಶಿಕಾರಿಪುರದಲ್ಲಿ ಬಿಜೆಪಿಯ ಬಿ.ವೈ ವಿಜಯೇಂದ್ರ, ಪೂತ್ತಿರಿನಲ್ಲಿ ಪಕ್ಷೇತರ ಅರುಣ್ ಪುತ್ತಿಲ ಮುನ್ನಡೆ ಸಾಧಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!