ವಿಜಯಪುರ, ಬಾಗಲಕೋಟೆಗೆ ನಿತ್ಯ 25 ಸಾವಿರ ಡೋಸ್: ಸಿಎಂ

275

ಪ್ರಜಾಸ್ತ್ರ ಸುದ್ದಿ

ವಿಜಯಪುರ: ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗೆ ಸಧ್ಯ 15 ಸಾವಿರ ಕೋವಿಡ್ ಲಸಿಕೆ ಡೋಸ್ ಕೊಡಲಾಗ್ತಿದೆ. ಶೀಘ್ರದಲ್ಲಿ 25 ಸಾವಿರ ಡೋಸ್ ಕೊಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಆಲಮಟ್ಟಿಯಲ್ಲಿ ಅವಳಿ ಜಿಲ್ಲೆಗಳ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿ ಈ ರೀತಿ ಹೇಳಿದ್ರು.

ವಿಜಯಪುರದಲ್ಲಿ ನಿರ್ಮಿಸಲಾಗ್ತಿರುವ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ 22 ಕೋಟಿ ಅನುದಾನ ನೀಡಲಾಗುವುದು. ಒಂದೆರಡು ದಿನಗಳಲ್ಲಿ ರಾಜ್ಯಕ್ಕೆ 350 ಕೋಟಿ ಎನ್ ಡಿಆರ್ ಎಫ್ ಅನುದಾನ ಬಿಡುಗಡೆಯಾಗಲಿದೆ. ಪಿಯುಸಿಯಿಂದ ಪಿಜಿವರೆಗಿನ 18 ಲಕ್ಷ ರೈತ ಮಕ್ಕಳಿಗೆ 1 ಸಾವಿರ ಕೋಟಿ ವಿದ್ಯಾರ್ಥಿ ವೇತನ ಬಿಡುಗಡೆ ಮಾಡಲಾಗುವುದು. ಸೆಪ್ಟೆಂಬರ್ 5ರಂದು ಚಾಲನೆ ನೀಡಲಾಗುವುದು. ಅಂದು ಪ್ರತಿ ಜಿಲ್ಲೆಯಿಂದ ಐವರು ವಿದ್ಯಾರ್ಥಿಗಳನ್ನ ಸಾಂಕೇತಿಕವಾಗಿ ಆಹ್ವಾನಿಸಲಾಗುವುದು ಅಂತಾ ಹೇಳಿದ್ರು.

ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಸಚಿವರಾದ ಗೋವಿಂದ ಕಾರಜೋಳ, ಉಮೇಶ ಕತ್ತಿ, ಸಿ.ಸಿ ಪಾಟೀಲ, ಶಾಸಕರಾದ ಯತ್ನಾಳ, ಎಂ.ಬಿ ಪಾಟೀಲ, ಸೋಮನಗೌಡ ಪಾಟೀಲ ಸಾಸನೂರ, ಯಶವಂತರಾಯಗೌಡ, ವೀರಣ್ಣ ಚರಂತಿಮಠ, ಸಿದ್ದು ಸವದಿ, ಎ.ಎಸ್ ಪಾಟೀಲ ನಡಹಳ್ಳಿ, ಸಿದ್ದು ಸವದಿ, ದೊಡ್ಡನಗೌಡ ಪಾಟೀಲ ಸೇರಿದಂತೆ ಅನೇಕರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!