ಅನ್ ಲಾಕ್ 3.0: ರಾತ್ರಿ ಕರ್ಫ್ಯೂ ತೆರವು.. ಜಿಮ್, ವಿಮಾನ ಶುರು

390

ಪ್ರಜಾಸ್ತ್ರ ಸುದ್ದಿ

ನವದೆಹಲಿ: ಕರೋನಾ ಸಂಬಂಧ ದೇಶ್ಯಾದ್ಯಂತ ಹೇರಿದ್ದ ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಳಸ್ತಿರುವ ಕೇಂದ್ರ ಸರ್ಕಾರ, ಇದೀಗ ಅನ್ ಲಾಕ್ 3.0 ಪ್ರಕ್ರಿಯೆ ಶುರುವಾಗಿದೆ. ಆರ್ಥಿಕತೆಗೆ ಶಕ್ತಿ ತುಂಬುವ ಸಲುವಾಗಿ ಅನ್ ಲಾಕ್ 3.0 ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಇನ್ಮುಂದೆ ನೈಟ್ ಕರ್ಫ್ಯೂ ಇರುವುದಿಲ್ಲ. ಆಗಸ್ಟ್ 1ರಿಂದ ಅನ್ವಯವಾಗುವಂತೆ ನೈಟ್ ಕರ್ಫ್ಯೂ ತೆಗೆದು ಹಾಕಲಾಗಿದೆ. ಆಗಸ್ಟ್ 5ರಿಂದ ಜಿಮ್ ಓಪನ್, ವಿಮಾನ ಪ್ರಯಾಣ ಶುರು ಮಾಡಲು ಅವಕಾಶ ನೀಡಲಾಗಿದೆ. ಇನ್ನು ಸ್ವಾತಂತ್ರ್ಯ ದಿನಾಚರಣೆ ಆಚರಿಸಲು ಮಾರ್ಗಸೂಚಿಗಳನ್ನ ಬಿಡುಗಡೆ ಮಾಡಲಾಗಿದೆ. ಇನ್ನು ಆಗಸ್ಟ್ 31ರ ತನಕ ಶಾಲಾ ಕಾಲೇಜು ತೆರೆಯುವಂತಿಲ್ಲ.

ಇದರ ಜೊತೆಗೆ ಥಿಯೇಟರ್, ಈಜುಕೊಳ, ಮೆಟ್ರೋ ಬಂದ್ ಇರಲಿದೆ. ಬಾರ್, ಕ್ರೀಡಾ ಚಟುವಟಿಕೆ ಸಹ ನಡೆಸುವಂತಿಲ್ಲ. ಮನರಂಜನಾ ಪಾರ್ಕ್, ಅಸೆಂಬ್ಲಿ ಸಹ ಓಪನ್ ಮಾಡುವಂತಿಲ್ಲ.




Leave a Reply

Your email address will not be published. Required fields are marked *

error: Content is protected !!