ಪೊಲೀಸ್ ವಶಕ್ಕೆ ಮಣಿಕಂಠ ರಾಠೋಡ

193

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಸಚಿವ ಪ್ರಿಯಾಂಕ್ ಖರ್ಗೆ ಹಾಗೂ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ನಡುವೆ ಜಟಾಪಟಿ ನಡೆದಿದೆ. ಖರ್ಗೆ ತನ್ನ ಮೇಲೆ ಮಾಡಿರುವ ಆರೋಪಿಗಳಿಗೆ ಸ್ಪಷ್ಟನೆ ನೀಡುವ ಸಲುವಾಗಿ ಮಾಧ್ಯಮಗೋಷ್ಠಿ ನಡೆಸಲು ಮುಂದಾಗಿದ್ದ ಹೊತ್ತಿನಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಮಾಧ್ಯಮಗೋಷ್ಠಿ ಕರೆಯಲಾಗಿತ್ತು. ಈ ಕುರಿತು ಮಾಹಿತಿ ಪಡೆದಿದ್ದ ಪೊಲೀಸರು ಪತ್ರಿಕಾ ಭವನಕ್ಕೆ ಬಂದು ಕುಳಿತಿದ್ದರು. ಆದರೆ, ರಾಠೋಡ ವಾಟ್ಸಪ್ ವಾಯ್ಸ್ ಮೆಸೇಜ್ ಮೂಲಕ ರಿಂಗ್ ರಸ್ತೆಯ ಭಾರತ ಫ್ರೈಡ್ ಅಪಾರ್ಟ್ ಮೆಂಟ್ ಗೆ ಬರಲು ಮಾಧ್ಯಮದವರಿಗೆ ಸಂದೇಶ ಕಳಿಸಿದ್ದ. ಅಲ್ಲಿಗೆ ಬಂದ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದಕ್ಕೂ ಮೊದಲು ಲಿಖಿತ ಹೇಳಿಕೆ ನೀಡಿರುವ ಮಣಿಕಂಠ ರಾಠೋಡ, ಪ್ರಿಯಾಂಕ್ ಖರ್ಗೆ ನನ್ನ ವಿರುದ್ಧ ಸುಳ್ಳು ಹೇಳಿಕೆ ನೀಡಿದ್ದಾರೆ. ವಿನಾಕಾರಣ ನಮ್ಮ ಪಕ್ಷದ ಮುಖಂಡರನ್ನು ಟೀಕಿಸಿದ್ದಾರೆ ಎಂದಿದ್ದಾರೆ.

ಕಾರು ಅಪಘಾತವನ್ನು ತಮ್ಮ ಮೇಲೆ ನಡೆದ ಹಲ್ಲೆ ಎಂದು ಮಣಿಕಂಠ ಬಿಂಬಿಸಿದ್ದ. ಇದನ್ನು ಪೊಲೀಸರು ಸಹ ಅಲ್ಲಗೆಳೆದಿದ್ದು, ಇದೊಂದು ಅಪಘಾತ ಎಂದಿದ್ದಾರೆ. ಹೀಗಾಗಿ ರಾಜಕೀಯ ಜಟಾಪಟಿಗೆ ಕಾರಣವಾಗಿದ್ದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.




Leave a Reply

Your email address will not be published. Required fields are marked *

error: Content is protected !!