ಅನ್ ಲಾಕ್ 3.0 ಸಂಜೆ ಪ್ರಕಟ: ಇದಕ್ಕೆಲ್ಲ ಅವಕಾಶ ಸಿಗಬಹುದಾ?

267

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದಲ್ಲಿ ಕರೋನಾ ಸೋಂಕು ಹಾಗೂ ಮರಣದ ಪ್ರಮಾಣ ಇಳಿಕೆ ಕಾಣ್ತಿದೆ. ಹೀಗಾಗಿ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಕೆ ಮಾಡಲಾಗ್ತಿದೆ. ಈಗಾಗ್ಲೇ ಬಹುತೇಕ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದೆ. ಇದರ ಜೊತೆಗೆ ಸಂಜೆ 5ಗಂಟೆಯ ತನಕ ಅವಕಾಶ ಕಲ್ಪಿಸಲಾಗಿದೆ. ಸೋಮವಾರದಿಂದ ಅನ್ ಲಾಕ್ 3.0 ಶುರುವಾಗಲಿದೆ.

ಅನ್ ಲಾಕ್ 3.0ಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಇಂದು ಸಚಿವರೊಂದಿಗೆ ಸಭೆ ನಡೆಸಲಿದ್ದಾರೆ. ಸಭೆಯ ಬಳಿಕ ಸಂಜೆ ಲಾಕ್ ಡೌನ್ ಸಡಿಲಿಕೆಗೆ ಸಂಬಂಧಿಸಿದಂತೆ ಮಾತ್ನಾಡಲಿದ್ದಾರೆ.

ಸಂಜೆ 5 ಗಂಟೆಯ ತನಕ ನೀಡಲಾಗಿರುವ ವಾಣಿಜ್ಯ ಚಟುವಟಿಕೆಗಳ ಅವಧಿಯನ್ನ ರಾತ್ರಿ 8 ಗಂಟೆಯ ತನಕ ವಿಸ್ತರಿಸುವ ಸಾಧ್ಯತೆಯಿದೆ. ಮದುವೆ, ಸಭೆ, ಸಮಾರಂಭಗಳಿಗೆ ಸೀಮಿತ ಜನರೊಂದಿಗೆ ನಡೆಸಲು ಅವಕಾಶ ಕೊಡುವ ಸಾಧ್ಯತೆಯಿದೆ. ಥಿಯೇಟರ್, ಮಾಲ್, ವಾಣಿಜ್ಯ ಸಂಕಿರ್ಣಗಳಿಗೆ ಶೇಕಡ 50ರಷ್ಟು ಜನರೊಂದಿಗೆ ಅವಕಾಶ ನೀಡಬಹುದು. ಇನ್ನು ವೀಕೆಂಡ್ ಕರ್ಫ್ಯೂ ಮುಂದುವರೆಯುವ ಸಾಧ್ಯತೆಯಿದೆ.




Leave a Reply

Your email address will not be published. Required fields are marked *

error: Content is protected !!