ಕೋಝಿಕೋಡ್: ಕೇರಳದಲ್ಲಿ ಡೆಡ್ಲಿ ಕರೋನಾದಿಂದಾಗಿ 4 ತಿಂಗಳು ಕೂಸು ಸಾವನ್ನಪ್ಪಿದೆ. ಉಸಿರಾಟದ ಸಮಸ್ಯೆಯಿಂದ ಮಗುವನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಟಲು ದ್ರವದ ಪರೀಕ್ಷೆ ಮಾಡಿಸಿದಾಗ ಕರೋನಾ ಸೋಂಕು ದೃಢಪಟ್ಟಿತ್ತು.
ಮಗುವಿಗೆ ಹೃದಯ ಸಂಬಂಧಿ ಕಾಯಿಲೆಯಿದ್ದ ಪರಿಣಾಮ ಸೋಂಕು ಬೇಗ ಹರಡಿಕೊಂಡಿದೆ. ಇದ್ರಿಂದಾಗಿ ಇಂದು ಮುಂಜಾನೆ ಮಗು ಸಾವನ್ನಪ್ಪಿದೆ. ಮೂರು ತಿಂಗಳ ಹಿಂದೆ ಮಗುವಿಗೆ ಹೃದಯ ಸಂಬಂಧಿ ಚಿಕಿತ್ಸೆ ನೀಡಲಾಗಿತ್ತು. ಆದ್ರೆ, ಸೋಂಕು ಕಾಣಿಸಿಕೊಂಡು ಬಹುಬೇಗ ವ್ಯಾಪಿಸಿ ಸಾವನ್ನಪ್ಪಿದೆ. ಕೇರಳದಲ್ಲಿ 438 ಕೇಸ್ ದಾಖಲಾಗಿದ್ದು, ಮೂವರು ಪ್ರಾಣ ಕಳೆದುಕೊಂಡಿದ್ದಾರೆ.