Search

ಬೆಳಗಾವಿ ಸೋಂಕಿತೆಗೆ ಸಿಂದಗಿ ವ್ಯಕ್ತಿ ಪ್ರಥಮ ಸಂಪರ್ಕಿತ!

2812

ಪ್ರಜಾಸ್ತ್ರ ಸುದ್ದಿ

ಸಿಂದಗಿ: ಬೆಳಗಾವಿಯಲ್ಲಿ 27 ವರ್ಷದ ಪೆಸೆಂಟ್ ನಂಬರ್ 1814ರ ಮಹಿಳೆಗೆ ಇಂದು ಸೋಂಕು ದೃಢಪಟ್ಟಿದೆ. ಈಕೆ ಗರ್ಭಿಣಿಯಾಗಿದ್ದು, ಮಹಾರಾಷ್ಟ್ರದಲ್ಲಿ ಸಂಬಂಧಿಕರೊಬ್ಬರ ಮದ್ವೆಗೆ ತಂದೆ ಹಾಗೂ ಮಗಳು ಮೇ 11ರಂದು ಹೋಗಿ ಬಂದಿದ್ದಾರೆ.

ಈ ಮಹಿಳೆ ಸಿಂದಗಿ ಮೂಲದವಳಾಗಿದ್ದು, ರಾಮದುರ್ಗ ತಾಲೂಕಿನ ಶಿವಪೇಟೆ ಗ್ರಾಮದ ವ್ಯಕ್ತಿಯೊಬ್ಬನಿಗೆ ಮದ್ವೆ ಮಾಡಿಕೊಡಲಾಗಿದೆ. ಈ ಮಹಿಳೆ ಹಾಗೂ ತಂದೆ ಇಬ್ಬರು ಮಹಾರಾಷ್ಟ್ರಕ್ಕೆ ಮದುವೆಗೆ ಹೋಗಿ ಮೇ 11ಕ್ಕೆ ವಾಪಸ್ ಆಗಿದ್ದಾರೆ. ಮಗಳು ಹಾಗೂ ಆಕೆ ಮಕ್ಕಳನ್ನು ಬಿಟ್ಟು ತಂದೆ ಸಿಂದಗಿಗೆ ವಾಪಸ್ ಆಗಿದ್ದಾನಂತೆ.

ಶಿವಪೇಟೆಗೆ ಬಂದ ಮಹಿಳೆಯನ್ನ ಗ್ರಾಮಸ್ಥರು ಊರೊಳಗೆ ಸೇರಿಸಿಕೊಂಡಿಲ್ಲ. ಹೀಗಾಗಿ ಆಕೆಯನ್ನ ರಾಮದುರ್ಗದ ಬಿಸಿಎಂ ಹಾಸ್ಟೇಲ್ ನಲ್ಲಿ ಸಂಸ್ಥಾ ಕ್ವಾರಂಟೈನ್ ಮಾಡಲಾಗಿದೆ. ಈ ಮಹಿಳೆಯ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡಲಾಗಿತ್ತು. ಇದೀಗ ಆಕೆಗೆ ಸೋಂಕು ದೃಢಪಟ್ಟಿದೆ.

ಇನ್ನು ಸೋಂಕಿತೆಗೆ ತಂದೆ ಪ್ರಥಮ ಸಂಪರ್ಕಿತನೆಂದು ಹೇಳಲಾಗ್ತಿದ್ದು, ಈತ ವಾಪಸ್ ಸಿಂದಗಿಯ ಸ್ವಗ್ರಾಮವಾದ ಚಾಂದಕೋಟೆಗೆ ಬಂದಿದ್ದಾನೆ ಎಂದು ಹೇಳಲಾಗ್ತಿದೆ. ಈ ಮೂಲಕ ಬೆಳಗಾವಿಯ ಸೋಂಕಿತೆಯ ಮಹಿಳೆಯ ಲಿಂಕ್ ಸಿಂದಗಿಗೆ ಇರುವುದು ಕನ್ಫರ್ಮ್ ಆಗಿದೆ.




Leave a Reply

Your email address will not be published. Required fields are marked *

error: Content is protected !!