ರಾಜ್ಯದ ಪತ್ರಕರ್ತರೊಬ್ಬರಲ್ಲಿ ಕಾಣಿಸಿಕೊಂಡ ಕರೋನಾ

450

ಬೆಂಗಳೂರು: ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಲ್ಲಿನ ಪತ್ರಕರ್ತರಿಗೆ ಕರೋನಾ ಸೋಂಕು ಕಾಣಿಸಿಕೊಂಡಿರುವ ವಿಚಾರದ ನಡುವೆ, ರಾಜದಲ್ಲಿಯೂ ಪತ್ರಕರ್ತರೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಟಿವಿ ಮಾಧ್ಯಮದ ವಿಡಿಯೋ ಜರ್ನಲಿಸ್ಟ್ ಒಬ್ಬರಿಗೆ ಸೋಂಕು ದೃಢಪಟ್ಟಿದೆ.

ಸಿಎಂ ಬಿ.ಎಸ್ ಯಡಿಯೂರಪ್ಪ ಆದಿಯಾಗಿ ಅನೇಕರು ಪತ್ರಕರ್ತರಿಗೆ ಎಚ್ಚರಿಕೆಯಿಂದ ಇರಿ. ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ ಎಂದಿದ್ರು. ಹೀಗಿರುವ ಹೊತ್ತಿನಲ್ಲಿಯೇ ಸೋಂಕು ದೃಢಪಟ್ಟಿದೆ. ಸುದ್ದಿ ವಾಹಿನಿಯ ಕ್ಯಾಮೆರಾಮನ್ ಒಬ್ಬರು, ರೆಡ್ ಝೋನ್ ಇದ್ದ ಪ್ರದೇಶಕ್ಕೆ ಹೋಗಿ ವಿಡಿಯೋ ಮಾಡಿದ್ರು ಎಂದು ಹೇಳಲಾಗ್ತಿದೆ. ಕಳೆದ 3 ದಿನಗಳಿಂದ ಪತ್ರಕರ್ತರಿಗೆ ಕರೋನಾ ಟೆಸ್ಟ್ ಮಾಡಿಸಲಾಗ್ತಿದೆ. ಈ ವೇಳೆ ಸೋಂಕು ಇರುವುದು ಪತ್ತೆಯಾಗಿದೆ.

ಜಿಲ್ಲಾ ಕೇಂದ್ರಗಳಲ್ಲಿರುವ ಪತ್ರಕರ್ತರಿಗೆ ಕರೋನಾ ಟೆಸ್ಟ್ ನಡೆಸಲಾಗ್ತಿದೆ. ಅದರಂತೆ ತಾಲೂಕು ಮಟ್ಟದಲ್ಲಿರುವ ಪತ್ರಕರ್ತರಿಗೆ ಕರೋನಾ ಟೆಸ್ಟ್ ವಿಚಾರದ ಬಗ್ಗೆ ಏನ್ ಮಾಡಲಾಗ್ತಿದೆ. ಇವರಿಗೆ ವೈದ್ಯಕೀಯ ತಪಾಸಣೆ ಎಲ್ಲಿ ಮಾಡಿಸಲಾಗ್ತಿದೆ. ಅವರು ತಪಾಸಣೆ ಕೇಂದ್ರಕ್ಕೆ ಹೋಗಲು ಏನು ವ್ಯವಸ್ಥೆ ಮಾಡಲಾಗಿದೆ ಅನ್ನೋದರ ಕುರಿತು ರಾಜ್ಯ ಸರ್ಕಾರ ಸ್ಪಷ್ಟಪಡಿಸಬೇಕಿದೆ.

ಇದೀಗ ಸೋಂಕು ಕಾಣಿಸಿಕೊಂಡ ಕ್ಯಾಮೆರಾಮನ್ ಅವರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರನ್ನ ಹೋಂ ಕ್ವಾರಂಟೈನ್ ಮಾಡಲಾಗಿದೆ. ಈ ಮೂಲಕ ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ.




Leave a Reply

Your email address will not be published. Required fields are marked *

error: Content is protected !!