ಉಡುಪಿ, ಕಲಬುರಗಿಯಲ್ಲಿ ಸಾವಿರ ದಾಟಿದ ಸೋಂಕಿತರು.. ಜಿಲ್ಲಾವಾರು ಪಟ್ಟಿ ಇಲ್ಲಿದೆ..

380

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಕರುನಾಡಲ್ಲಿ ಕರೋನಾ ಕಬಂಧಬಾಹು ಭರ್ಜರಿಯಾಗಿ ವ್ಯಾಪಿಸಿಕೊಳ್ತಿದೆ. ಹೀಗಾಗಿ ನಿತ್ಯ ಸರಾಸರಿ 200 ಜನರಲ್ಲಿ ಸೋಂಕು ಕಾಣಿಸಿಕೊಳ್ತಿದೆ. ಹೀಗಾಗಿ 7 ಸಾವಿರಕ್ಕೂ ಅಧಿಕ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈಗ ಉಡುಪಿ ಬಳಿಕ ಕಲಬುರಗಿಯಲ್ಲಿ ಸೋಂಕಿತರ ಸಂಖ್ಯೆ ಸಾವಿರದಾಟಿದೆ.

ರಾಜ್ಯದಲ್ಲಿ ಅತೀ ಸೋಂಕಿತರು ಇರುವ 9 ಜಿಲ್ಲೆಗಳ ಪಟ್ಟಿ ಇಲ್ಲಿದೆ..

ಉಡುಪಿ 1035, ಕಲಬುರಗಿ 1007, ಯಾದಗಿರಿ 828, ಬೆಂಗಳೂರು ನಗರ 772, ರಾಯಚೂರು 409, ಬೀದರ 383, ದಕ್ಷಿಣ ಕನ್ನಡ 370, ಮಂಡ್ಯ 343, ಬೆಳಗಾವಿ 307 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸೋಂಕಿತರ ಪಟ್ಟಿಯಲ್ಲಿ ಉಡುಪಿ ಮೊದಲು ಇದ್ರೆ, ಸಾವನ್ನಪ್ಪಿದ್ದವರ ಪಟ್ಟಿಯಲ್ಲಿ ಬೆಂಗಳೂರು (38 ಸಾವು) ಮೊದಲು ಇದೆ. ಕಲಬುರಗಿ 10, ಬೆಳಗಾವಿ 7, ದಾವಣಗೆರೆ 6, ವಿಜಯಪುರ 6, ದಕ್ಷಿಣ ಕನ್ನಡದಲ್ಲಿ 6 ಜನರು ಸಾವನ್ನಪ್ಪಿದ್ದಾರೆ.

ಇನ್ನು ಹಾಸನ, ವಿಜಯಪುರ ಹಾಗೂ ದಾವಣಗೆರೆಯಲ್ಲಿ 200 ಅಧಿಕ ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಚಿಕ್ಕಬಳ್ಳಾಪುರ, ಮೈಸೂರು, ಉತ್ತರ ಕನ್ನಡ, ಶಿವಮೊಗ್ಗ, ಧಾರವಾಡ ಜಿಲ್ಲೆಯಲ್ಲಿ 100 ಹೆಚ್ಚು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.




Leave a Reply

Your email address will not be published. Required fields are marked *

error: Content is protected !!