ಆಡಿಯೋ ವಿವಾದ.. ಜಗ್ಗೇಶ ಸ್ಪಷ್ಟನೆ.. ದರ್ಶನ ಮೌನ..

327

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ನಟ ಚಾಲೆಂಜಿಂಗ್ ಸ್ಟಾರ್ ದರ್ಶನ ಬಗ್ಗೆ ಹಿರಿಯ ನಟ ಜಗ್ಗೇಶ ಕೆಟ್ಟದಾಗಿ ಮಾತ್ನಾಡಿದ್ದಾರೆ ಎಂದು ಆರೋಪಿಸಿ, ಶೂಟಿಂಗ್ ಸೆಟ್ ನಲ್ಲಿಯೇ ಗಲಾಟೆ ಮಾಡಲಾಗಿದೆ. ದರ್ಶನ ಅಭಿಮಾನಿಗಳ ನಡೆ ಬಗ್ಗೆ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ನಟ ಜಗ್ಗೇಶ ಆಡಿಯೋ ಕುರಿತಾಗಿ ಸ್ಪಷ್ಟನೆ ನೀಡಿದ್ದಾರೆ. ಟ್ವೀಟರ್ ನಲ್ಲಿ ತಮ್ಗೆ ಆದ ನೋವನ್ನ ಆಕ್ರೋಶ ಭರಿತರಾಗಿ ವ್ಯಕ್ತಪಡಿಸಿದ್ದಾರೆ.

ಆಡಿಯೋದಲ್ಲಿ ಹೇಳಿರುವ ಮಾತು ಯಾರ ಬಗ್ಗೆ ಅನ್ನೋದನ್ನ ಜಗ್ಗೇಶ ಹೇಳಿದ್ದಾರೆ. ಘಟನೆ ಇಷ್ಟೊಂದು ದೊಡ್ಡದಾಗಿದೆ. ಇಷ್ಟಾದ್ರೂ ನಟ ದರ್ಶನ ಈ ಬಗ್ಗೆ ಯಾಕೆ ಪ್ರತಿಕ್ರಿಯೆ ನೀಡಿಲ್ಲ. ತಮ್ಮ ಅಭಿಮಾನಿಗಳ ವರ್ತನೆ ಕುರಿತು ಯಾಕೆ ಅವರು ಮಾತ್ನಾಡಿಲ್ಲ ಅನ್ನೋ ಕುತೂಹಲ ಮೂಡಿದೆ. ಈ ಬಗ್ಗೆ ನಟ ದರ್ಶನ ಮಾತ್ನಾಡ್ತಾರಾ ಕಾದು ನೋಡಬೇಕಿದೆ.

ಇನ್ನು ಚಂದನವನದಲ್ಲಿ ಯಾಕೆ ಇಷ್ಟೊಂದು ರಾಜಕೀಯ, ದ್ವೇಷ, ಅಸೂಯೆ ತುಂಬಿಕೊಳ್ಳುತ್ತಿದೆ? ಸ್ಟಾರ್ ವಾರ್ ಹೆಸರಿನಲ್ಲಿ ದಬ್ಬಾಳಿಕೆ ನಡೆಯುತ್ತಿದ್ಯಾ ಅನ್ನೋ ಪ್ರಶ್ನೆ ಕೂಡಾ ಕನ್ನಡಿಗರಲ್ಲಿ ಮೂಡಿದೆ.




Leave a Reply

Your email address will not be published. Required fields are marked *

error: Content is protected !!