ನೋಟ್ ನಿಷೇಧ ವಿಚಾರ: ಸುಪ್ರೀಂನಲ್ಲಿ 4:1 ಬಹುಮತ

400

ಪ್ರಜಾಸ್ತ್ರ ಸುದ್ದಿ

ನವದೆಹಲಿ: ನೋಟು ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಪಂಚ ಪೀಠ 4:1 ಬಹುಮತದೊಂದಿಗೆ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದೆ. ಆದರೆ, ಕರ್ನಾಟಕ ಮೂಲದ ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ನೋಟು ನಿಷೇಧ ಕಾನೂನುಬಾಹಿರ ಎಂದಿದ್ದಾರೆ.

ನವೆಂಬರ್ 8, 2016ರ ಕೇಂದ್ರದ ಅಧಿಸೂಚನೆ ಕಾನೂನುಬಾಹಿರ. ಆದರೆ ಯಥಾಸ್ಥಿತಿ ಕಾಪಾಡಲು ಸಾಧ್ಯವಿಲ್ಲ. ನೋಟು ನಿಷೇಧ ಕಾನೂನು ವಿರುದ್ಧ ಚಲಾಯಿಸಿದ ಅಧಿಕಾರ. ಜಾರಿಗೊಳಿಸಿದ ರೀತಿ ಕಾನೂನು ರೀತಿಯಲ್ಲಿ ಇಲ್ಲ ಎಂದು ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಕೇಂದ್ರ ಸರ್ಕಾರ ನೋಟು ಅಮಾನ್ಯೀಕರಣ ಮಾಡಿದೆ ಅನ್ನೋ ಒಂದು ಕಾರಣಕ್ಕೆ ಪ್ರಕ್ರಿಯೆ ತಪ್ಪು ಎನ್ನಲು ಆಗುವುದಿಲ್ಲ. ಪ್ರಮಾಣಾನುಗಣತೆಯಲ್ಲಿ ಬ್ಯಾನ್ ಕ್ರಮವನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ನೋಟುಗಳ ವಿನಿಮಯಕ್ಕೆ 52 ದಿನಗಳು ಅಸಮಂಜಸ ಎಂದು ಹೇಳಲು ಆಗುವುದಿಲ್ಲ ಅನ್ನೋದು ಇತರೆ ನಾಲ್ವರು ನ್ಯಾಯಮೂರ್ತಿಗಳ ಅಭಿಪ್ರಾಯವಾಗಿದೆ.

ಆರ್ ಬಿಐ ಕಾಯ್ದೆ ಪ್ರಕಾರ ನೋಟು ನಿಷೇಧದ ಶಿಫಾರಸು ಆರ್ ಬಿಐ ಮಂಡಳಿಯಿಂದ ಸ್ವತಂತ್ರವಾಗಿ ಬರಬೇಕು ಅನ್ನೋದು ಅರ್ಜಿದಾರರ ವಾದ.




Leave a Reply

Your email address will not be published. Required fields are marked *

error: Content is protected !!