ದೇವರಹಿಪ್ಪರಗಿ ಪ.ಪಂ ಜೆಡಿಎಸ್-ಕಾಂಗ್ರೆಸ್ ಪಾಲು

313

ಪ್ರಜಾಸ್ತ್ರ ಸುದ್ದಿ

ದೇವರಹಿಪ್ಪರಗಿ: ವಿಜಯಪುರ ಜಿಲ್ಲೆ ದೇವರಹಿಪ್ಪರಗಿ ಪಟ್ಟಣ ಪಂಚಾಯ್ತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅವಿರೋಧ ಆಯ್ಕೆ ನಡೆದಿದೆ. ಅಧ್ಯಕ್ಷ  ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆ ಮೀಸಲಾತಿ ನಿಗದಿಯಾಗಿತ್ತು.

ಅಧ್ಯಕ್ಷ ಸ್ಥಾನಕ್ಕೆ 15ನೇ ವಾರ್ಡಿನ ಜಿಡಿಎಸ್ ಸದಸ್ಯೆ ಶಾಬಿರಾ ಮಳಖೇಡ  ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 17ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ರುಖಮಾಬಾಯಿ ನಾಮಪತ್ರ ಸಲ್ಲಿಸಿದ್ರು. ಈ ಇಬ್ಬರು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 17 ಜನ ಸದಸ್ಯರಿದ್ದು, ಅದರಲ್ಲಿ ಕಾಂಗ್ರೇಸ್ 6, ಜೆಡಿಎಸ್ 8 ಹಾಗೂ ಬಿಜೆಪಿ 3 ಸ್ಥಾನಗಳಿವೆ. 17 ಜನ ಸದಸ್ಯರಲ್ಲಿ 3-ಜನ ಗೈರುಹಾಜರಾಗಿದ್ದರು ಅದರಲ್ಲಿ ಕಾಂಗ್ರೆಸ್ಸಿನ-2, ಬಿಜೆಪಿ ಪಕ್ಷದ-1 ಸದಸ್ಯರಾಗಿದ್ದಾರೆ.

ಜೆಡಿಎಸ್ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸಹಿ ಹಂಚಿ ಸಂಭ್ರಮಿಸಿದ್ರು. ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಬಿ.ಎಸ್.ಕಡಕಬಾವಿ, ಕಾಯ೯ದಶಿ೯ಯಾಗಿ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಲ್.ಡಿ.ಮುಲ್ಲಾ ಕಾಯ೯ನಿವ೯ಹಿಸಿದರು.ಚುನಾವಣಾ ಆಯೋಗದ ಚುನಾವಣಾ ವೇಳಾಪಟ್ಟಿಯ ನಿಯಮದಂತೆ,ಎಲ್ಲಾ ಪ್ರಕ್ರಿಯೆಗಳನ್ನು ಜರುಗಿಸಲಾಯಿತು.ತಹಶಿಲ್ದಾರ ಅವರು




Leave a Reply

Your email address will not be published. Required fields are marked *

error: Content is protected !!