ಪತ್ರಕರ್ತರ ಮೇಲೆ ಹಲ್ಲೆ: ರಾಜ್ಯದ ಹಲವೆಡೆ ಪ್ರತಿಭಟನೆ

288

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಇಡೀ ರಾಷ್ಟ್ರದಲ್ಲಿ ರಾಜ್ಯದ ಮಾನ ಮರ್ಯಾದೆ ಹೋಗುವಂತೆ ಮಾಡಿರುವ ಡಿಜೆ ಹಳ್ಳಿ ಪ್ರಕರಣದಿಂದ ಸಾಕಷ್ಟು ಸಾವು ನೋವು ಸಂಭವಿಸಿದೆ. ಮೂವರು ಸಾವನ್ನಪ್ಪಿದ್ರೆ, 50ಕ್ಕೂ ಹೆಚ್ಚು ಪೊಲೀಸ್ರು ಗಾಯಗೊಂಡಿದ್ದಾರೆ. ಇದರ ಜೊತೆಗೆ ಸುದ್ದಿ ಮಾಡಲು ಹೋದ ಪತ್ರಕರ್ತರ ಮೇಲೆ ಹಲ್ಲೆ ಮಾಡಲಾಗಿದೆ.

ಮಂಗಳವಾರ ತಡರಾತ್ರಿ ನಡೆದ ಘಟನೆಯಲ್ಲಿ ಪತ್ರಕರ್ತರ ಮೇಲೆ ಹಲ್ಲೆ ಮಾಡಲಾಗಿದೆ. ಕ್ಯಾಮೆರಾ ಸೇರಿ ಅನೇಕ ವಸ್ತುಗಳನ್ನ ಧ್ವಂಸ ಮಾಡಲಾಗಿದೆ. ಇದ್ರಿಂದಾಗಿ ಕೆಲ ಪತ್ರಕರ್ತರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಸಂಬಂಧ ರಾಜ್ಯದ ಹಲವೆಡೆ ಪ್ರತಿಭಟನೆ ನಡೆಸಿ, ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮನವಿ ಮಾಡಲಾಗಿದೆ.

ರಾಯಚೂರಿನಲ್ಲಿ ಮನವಿ ಸಲ್ಲಿಸಿದ ಪತ್ರಕರ್ತರು

ರಾಯಚೂರಿನಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಲಾಯ್ತು. ಇದೆ ರೀತಿ ಬಳ್ಳಾರಿಯಲ್ಲಿ ಸಹ ಪ್ರತಿಭಟನೆ ಮಾಡಿ, ಹಲ್ಲೆ ಮಾಡಿದವರ ವಿರುದ್ಧ ಶಿಸ್ತು ಕಾನೂನು ಕ್ರಮ ತೆಗೆದುಕೊಳ್ಳಿಯೆಂದು ಒತ್ತಾಯಿಸಲಾಗಿದೆ. ರಾಮನಗರ ಜಿಲ್ಲಾ ಪೊಲೀಸ್ ಭವನದ ಮುಂದೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿ, ಪುಂಡರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿವೆ.

ಕೊಪ್ಪಳ ಮೀಡಿಯಾ ಕ್ಲಬ್ ವತಿಯಿಂದ ಪತ್ರ ಚಳವಳಿ ಮೂಲಕ, ಪತ್ರಕರ್ತರ ಮೇಲಿನ ಹಲ್ಲೆಯನ್ನ ಖಂಡಿಸಲಾಯ್ತು. ಹೀಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸುವ ಮೂಲಕ ಮಾಧ್ಯಮದವರ ಮೇಲಿನ ಹಲ್ಲೆಯನ್ನ ಖಂಡಿಸಲಾಗಿದೆ. ‘ಪ್ರಜಾಸ್ತ್ರ’ ವೆಬ್ ಪತ್ರಿಕೆ ಸಹ ಪತ್ರಕರ್ತರ ಮೇಲಿನ ಹಲ್ಲೆಯನ್ನ ಖಂಡಿಸ್ತಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಿದೆ.




Leave a Reply

Your email address will not be published. Required fields are marked *

error: Content is protected !!