ಮೊಬೈಲ್ ನಂಬರ್ ಶೇರ್ ಮಾಡದಿರಲು ಸೂಚನೆ

410

ಬೆಂಗಳೂರು: ಇವತ್ತಿನ ದಿನಮಾನದಲ್ಲಿ ಪ್ರತಿಯೊಂದು ಆನ್ ಲೈನ್ ಶಾಪಿಂಗ್ ನಡೆಯುತ್ತಿದೆ. ಹಾಗಂದ್ಮೇಲೆ ಮೊಬೈಲ್ ನಂಬರ್ ಎಂಟ್ರಿ ಮಾಡಲ್ಬೇಕು. ಇದರ ಜೊತೆಗೆ ಶಾಪಿಂಗ್ ಮಾಲ್ ಗಳಲ್ಲಿ ಸಹ ಮೊಬೈಲ್ ನಂಬರ್ ಕೇಳಲಾಗುತ್ತೆ. ಇನ್ಮುಂದೆ ಹಾಗೇ ಮಾಡ್ಬೇಡಿ ಅಂತಾ ನಗರ ಪೊಲೀಸ್ ಆಯುಕ್ತರಾದ ಭಾಸ್ಕರ ರಾವ ಹೇಳಿದ್ದಾರೆ.

ಸೈಬರ್ ಕ್ರೈಂ ತಡೆಯುವ ಸುಲುವಾಗಿ ಟ್ವೀಟ್ ಮೂಲಕ ಪೊಲೀಸ್ ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಮೊದಲನೆಯದು ನಿಮ್ಮ ಮೊಬೈಲ್ ನಂಬರ್ ಕೊಡ್ಬೇಡಿ. ಎರಡನೆಯದು ಇ-ಮೇಲ್ ಶೇರ್ ಮಾಡ್ಬೇಡಿ ಅಂತಾ ಟ್ವೀಟ್ ನಲ್ಲಿ ಹೇಳಿದ್ದಾರೆ. ಈ ರೀತಿ ಕೊಡುವುದ್ರಿಂದ ಅದು ಡೇಟಾ ಆಗಿ ಪರಿವರ್ತನೆಯಾಗುತ್ತೆ. ಆಗ ಸೈಬರ್ ಕ್ರೈಂ ನಡೆಯಲು ದಾರಿ ಮಾಡಿಕೊಟ್ಟಂತೆ ಆಗುತ್ತೆ ಎಂದು ಸೂಚನೆ ನೀಡಿದ್ದಾರೆ.

ಓದುಗರ ಗಮನಕ್ಕೆ

ಸೋಷಿಯಲ್ ಮೀಡಿಯಾಗಳಲ್ಲಿಯೂ ಸಹ ನಿಮ್ಮ ಫೋನ್ ನಂಬರ್ ಶೇರ್ ಮಾಡ್ಬೇಡಿ ಅಂತಾ ಎಚ್ಚರಿಸಿದ್ದಾರೆ. ಇದು ಬರೀ ಬೆಂಗಳೂರಿಗೆ ಮಾತ್ರ ಸೀಮಿತವಲ್ಲ. ಎಲ್ಲೆಡೆಯೂ ಜನ ಎಚ್ಚರಿಕೆಯಿಂದ ಇರಬೇಕು ಅನ್ನೋ ಸೂಚನೆಯಾಗಿದೆ.




Leave a Reply

Your email address will not be published. Required fields are marked *

error: Content is protected !!