ನಟಿ ರಾಗಿಣಿ ಅರೆಸ್ಟ್.. ಎಷ್ಟು ದಿನ ನ್ಯಾಯಾಂಗ ಬಂಧನ?

326

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ವಿಚಾರಕ್ಕೆ ಸಂಬಂಧಿಸಿದಂತೆ ಸ್ಟಾರ್ ನಟಿ ರಾಗಿಣಿ ದ್ವಿವೇದಿಯನ್ನ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಮೂಲಕ ಡ್ರಗ್ಸ್ ವಿಚಾರದಲ್ಲಿ ಕನ್ನಡದ ಮೊದಲ ನಟಿಯ ಬಂಧನವಾಗಿದೆ.

ಇಂದು ಬೆಳಗ್ಗೆ ರಾಗಿಣಿ ಮನೆ ಸರ್ಚ್ ಮಾಡಿದ ಸಿಸಿಬಿ ಪೊಲೀಸರು ಹಲವು ಮಹತ್ವದ ದಾಖಲೆಗಳನ್ನ ಪಡೆದಿದ್ದಾರೆ. ರಾಗಿಣಿ ಮೊಬೈಲ್ ನಲ್ಲಿ ಡ್ರಗ್ಸ್ ಪೆಡ್ಲರ್ ಗಳ ನಂಬರ್ ಇರುವುದು ಪತ್ತೆಯಾಗಿದೆ. ಪಾರ್ಟಿ ಆಯೋಜನೆ ವಿಚಾರ ಬೆಳಕಿಗೆ ಬಂದಿದೆ. ಇದೀಗ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದು, ಆರೋಗ್ಯ ತಪಾಸಣೆ ಬಳಿಕ ಕೋರ್ಟ್ ಮುಂದೆ ಹಾಜರು ಪಡಿಸಲಾಗುತ್ತೆ.

ಕೋರ್ಟ್ ನಟಿ ರಾಗಿಣಿಗೆ 5ರಿಂದ 7 ದಿನ ಅಥವ 7 ರಿಂದ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಬಹುದು. ಇದ್ರಿಂದಾಗಿ ನಟಿಗೆ ಇದೀಗ ದೊಡ್ಡ ಸಂಕಷ್ಟ ಎದುರಾಗಿದೆ.




Leave a Reply

Your email address will not be published. Required fields are marked *

error: Content is protected !!