ವಿಕೃತ ಗ್ಯಾಂಗ್ ರೇಪ್ ಹಿಂದೆ ಮಾಂಸದಂಧೆಯ ಕರಾಳ ಮುಖ..!

410

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ಸಾಮಾಹಿಕ ಅತ್ಯಾಚಾರಕ್ಕೆ ಸಂಬಂದಿಸಿದಂತೆ ನಾಲ್ವರು ಅಕ್ರಮ ಬಾಂಗ್ಲಾ ವಲಸಿಗರನ್ನ ಬಂಧಿಸಲಾಗಿದೆ. ಶುಕ್ರವಾರ ಬೆಳಗ್ಗೆ ಸ್ಥಳ ಮಹಜರು ಮಾಡಲು ಹೋದಾಗ, ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಕಾಮುಕರ ಮೇಲೆ ಫೈರಿಂಗ್ ನಡೆಸಿ ಬಂಧಿಸಲಾಗಿದೆ.

ಸಾಗರ, ಹಕೀಲ, ರಿದಿಯಾ ಬಾಬು, ಮೊಹಮ್ಮದ ಬಾಬಾ ಶೇಕ್ ಈ ನಾಲ್ವರು ಹಾಗೂ ಇವರಿಗೆ ಸಾಥ್ ನೀಡಿದ ಇಬ್ಬರು ಯುವತಿಯರು ಬಾಂಗ್ಲಾ ಮೂಲದವರಾಗಿದ್ದಾರೆ. ಬೆಂಗಳೂರಿನ ರಾಮಮೂರ್ತಿ ನಗರದ ಎನ್ಆರ್ ಐ ಕಾಲೋನಿಯಲ್ಲಿ ಅಕ್ರಮವಾಗಿ ನೆಲಸಿದ್ದಾರೆ.

ಸಂತ್ರಸ್ತೆಯನ್ನ ಬಲವಂತವಾಗಿ ವೇಶ್ಯಾವಾಟಿಕೆ ದಂಧೆಗೆ ತಳ್ಳುವ ಸಂಬಂಧ ಈ ವಿಕೃತ ಕೃತ್ಯವೆಸಗಲಾಗಿದೆ ಅನ್ನೋದು ತಿಳಿದು ಬಂದಿದೆ. ಯುವತಿ ಇದಕ್ಕೆ ಒಪ್ಪದಿದ್ದಾಗ ಸಾಮಾಹಿಕ ಅತ್ಯಾಚಾರವೆಸಗಿದ್ದಾರೆ. ಗುಪ್ತಾಂಗಕ್ಕೆ ಮದ್ಯದ ಬಾಟಲ ಇರಿಸಿ ತೀವ್ರ ಹಿಂಸೆ ನೀಡಿದ್ದಾರೆ. ಇದೆಲ್ಲವನ್ನ ವಿಡಿಯೋ ಮಾಡಿದ್ದಾರೆ. ಈ ಘಟನೆಯಿಂದ ಎಲ್ಲಡೆ ಆಕ್ರೋಶ ವ್ಯಕ್ತವಾಗಿದ್ದು, ಕ್ರೂರಿ ಕಾಮುಕರನ್ನ ನೇಣಿಗೆ ಹಾಕಬೇಕು ಅನ್ನೋ ಕೂಗು ಎದ್ದಿದೆ.




Leave a Reply

Your email address will not be published. Required fields are marked *

error: Content is protected !!