ಹಾನಗಲ್ ಅತ್ಯಾಚಾರ ಪ್ರಕರಣ: ಮತ್ತಿಬ್ಬರ ಬಂಧನ

154

ಪ್ರಜಾಸ್ತ್ರ ಸುದ್ದಿ

ಹಾವೇರಿ: ಜಿಲ್ಲೆಯ ಹಾನಗಲ್ ತಾಲೂಕಿನ ನಾಲ್ಕರ್ ಕ್ರಾಸ್ ಹತ್ತಿರ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಸಂಬಂಧ ಶನಿವಾರ ಮತ್ತಿಬ್ಬರನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ.

ಅಕ್ಕಿಆಲೂರಿನ ಟೆಂಪೋ ಚಾಲಕ ಸಮೀವುಲ್ಲಾ ಲಾಲನವರ(24), ತರಕಾರಿ ವ್ಯಾಪಾರಿ ಇಸ್ಮಾಯಿಲ್ ಹುಬ್ಬಳ್ಳಿ(27) ಬಂಧಿತರು. ಪ್ರಕರಣಕ್ಕೆ ಸಂಬಂಧಿಸಿದಂತೆ ಇತರೆ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಇದುವರೆಗೂ ಬಂಧಿತರಾಗಿರುವವರೆಲ್ಲ 30 ವರ್ಷದೊಳಗಿನವರು ಹಾಗೂ ಚಾಲಕರು, ತರಕಾರಿ, ಹಾಲು, ಗ್ಯಾರೇಜ್, ಹೋಟೆಲ್, ಮೀನು ವ್ಯಾಪಾರ ಮಾಡುವವರಾಗಿದ್ದಾರೆ. ಖಾದರ್ ಜಾಫರಸಾಬ್ ಹಂಚಿನಮನಿ(28), ಸಾದಿಕ್ ಬಾಬುಸಾಬ್ ಅಗಸಿಮನಿ(29), ಮಫೀದ್ ಓಣಿಕೇರಿ(23), ಶೋಯೆಬ್ ನಿಹಾಜ್ ಅಹ್ಮದ್ ಮುಲ್ಲಾ(19), ಅಫ್ತಾಬ್ ಚಂದನಕಟ್ಟಿ(24), ಇಬ್ರಾಮನ್ ಬಶೀರ್ ಅಹ್ಮದ್ ಜೇಕಿನಕಟ್ಟಿ(23), ಇಬ್ರಾಹಿಂ ಖಾದರ್ ಗೌಸ್(27), ರೇಹಾನ್ ಮಹಮ್ಮದ್ ಹುಸೇನ್ ವಾಲೀಕಾರ(19) ಮಾದರಸಾಬ್ ಮಂಡಕ್ಕಿ(23) ತೌಸಿಫ್ ಅಹಮ್ಮದ್ ಚೌಟಿ(25) ಬಂಧಿತರು.

ಈ ಪ್ರಕರಣ ಸಂಬಂಧ ಹಾನಗಲ್ ಶಾಸಕ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಎಸ್ಐಟಿ ತನಿಖೆಗೆ ಒಪ್ಪಿಸಿ ಎಂದು ಆಗ್ರಹಿಸಿದ್ದಾರೆ. ಆದರೆ, ಸರ್ಕಾರ ಪ್ರಕರಣ ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!