ಪ್ರೇಮಿಯ ಕಾಮದಾಟಕ್ಕೆ ಜೀವ ಕಳೆದುಕೊಂಡ ಯುವತಿ

445

ಮೈಸೂರು: ನೀಚ ಪ್ರೇಮಿಯ ಕಾಮದಾಟದಿಂದಾಗಿ 19 ವರ್ಷದ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡ ಘಟನೆ ನಂಜನಗೂಡು ತಾಲೂಕಿನ ಮೆಲ್ಲಹಳ್ಳಿಯಲ್ಲಿ ನಡೆದಿದೆ. ಪಾಗಲ್ ಪ್ರೇಮಿ ಮಣಿಕಂಠನಿಂದಾಗಿ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

19 ವರ್ಷದ ಮೇಘನಾ ಹಾಗೂ ಮಣಿಕಂಠ ಲವ್ ಮಾಡ್ತಿದ್ರು. ಈ ವೇಳೆ ಇವರಿಬ್ಬರು ಏಕಾಂತದಲ್ಲಿ ಕಾಲ ಕಳೆದ ಫೋಟೋಗಳನ್ನ ತೆಗೆದುಕೊಂಡಿದ್ದ. ಇವರ ಮದುವೆಗೆ ಮನೆಯಲ್ಲಿ ಒಪ್ಪದ ಕಾರಣ, ಹುಡ್ಗಿ ಬೇರೆ ಹುಡ್ಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡಿದ್ಳು. ಹೀಗಿದ್ರೂ ಪಾಗಲ್ ಪ್ರೇಮಿ ಆಕೆಯ ಬೆನ್ನು ಬಿದ್ದಿದ್ದಾನೆ. ನಾನು ಕರೆದಾಗ ನೀನು ಬರಬೇಕು ಎಂದು ಬ್ಲಾಕ್ ಮೇಲ್ ಮಾಡಿದ್ದಾನೆ.

ಯುವತಿಗೆ ಸಾಕಷ್ಟು ಸಾರಿ ಕಿರುಕುಳ ನೀಡಿದ್ದಾನೆ. ಅಲ್ದೇ, ಮೇಘನಾ ಮದುವೆಯಾಗುವ ಹುಡ್ಗನಿಗೆ ಫೋಟೋಗಳನ್ನ ಕಳುಹಿಸಿದ್ದಾನೆ. ಇದ್ರಿಂದಾಗಿ ಬೇಸತ ಹುಡ್ಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಸಂಬಂಧ ಯುವತಿ ಪೋಷಕರು ದೂರು ನೀಡಿದ್ದು, ಕಾಮುಕ ಮಣಿಕಂಠನಿಗಾಗಿ ಪೊಲೀಸ್ರು ಹುಡುಕಾಟ ನಡೆಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!