ದಮ್ ಎಳೆಯೋಕೆ ಶುರು ಮಾಡಿದ ಡಿಂಪಲ್ ಕ್ವೀನ್

797

ಸ್ಯಾಂಡಲ್ ವುಡ್ ಅಂಗಳದ ಡಿಂಪಲ್ ಕ್ವೀನ್ ಅಂತಾನೆ ಫೇಮಸ್ ಆಗಿರುವ ನಟಿ ರಚಿತಾ ರಾಮ. ಸಾಕಷ್ಟು ಸೂಪರ್ ಹಿಟ್ ಸಿನ್ಮಾಗಳನ್ನ ನೀಡಿದ ರಚಿತ ರಾಮ, ಕಾಮಿಡಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಸ್ಮಾಲ್ ಸ್ಕ್ರೀನ್ ನಿಂದ ಬಿಗ್ ಸ್ಕ್ರೀನ್ ಗೆ ಬಂದು ಬಹುಬೇಗ ಬೇಡಿಕೆ ನಟಿಯಾದ್ರು. ಇದೀಗ ಈ ಬ್ಯೂಟಿ ದಮ್ ಎಳೆಯೋಕೆ ಶುರು ಮಾಡಿದ್ದಾರೆ.

ತುಂಬಾ ಸ್ಟೈಲ್ ಆಗಿ ನಟಿ ರಚಿತಾ ರಾಮ ದಮ್ ಎಳೆಯುತ್ತಿರುವ ಫೋಟೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಇದನ್ನ ನೋಡಿದ ಅವರ ಫ್ಯಾನ್ಸ್, ಇದನ್ನ ಯಾವಾಗಿನಿಂದ ಶುರು ಮಾಡಿದ್ದೀರಿ ಮೇಡಂ ಅಂತಾ ಕೇಳ್ತಿದ್ದಾರೆ. ಆದ್ರೆ, ಇದು ಚಿತ್ರವೊಂದರ ಶೂಟಿಂಗ್ ಸೀನ್ ಆಗಿದೆ.

ನಟಿ ರಚಿತಾ ರಾಮ, ನಿರ್ದೇಶಕ ಜೋಗಿ ಪ್ರೇಮ್ ಆ್ಯಕ್ಷನ್ ಕಟ್ ಹೇಳ್ತಿರುವ ಏಕ್ ಲವ್ ಯಾ ಅನ್ನೋ ಚಿತ್ರದಲ್ಲಿ ನಟಿಸ್ತಿದ್ದು, ಆ ಸಿನಿಮಾದ ಶೂಟಿಂಗ್ ನಲ್ಲಿ ನಟಿ ದಮ್ ಎಳೆಯುವ ಸೀನ್ ಇದೆ. ಇದನ್ನ ನೋಡಿದ ರಚ್ಚು ಅಭಿಮಾನಿಗಳ ಎದೆ ಬಡಿತ ಮಾತ್ರ ಜೋರಾಗಿದೆ.




Leave a Reply

Your email address will not be published. Required fields are marked *

error: Content is protected !!