ದೇವರಹಿಪ್ಪರಗಿ ಬಳಿ ಅಪಘಾತ: ಬೈಕ್ ಸವಾರಿಬ್ಬರ ಸಾವು

602

ದೇವರಹಿಪ್ಪರಗಿ: ವಾಹನವೊಂದನ್ನ ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರಿಬ್ಬರು ಸಾವನ್ನಪ್ಪಿರುವ ಘಟನೆ ಇಲ್ಲಿನ ಬ್ರಿಡ್ಜ್ ಹತ್ತಿರದ ಶಾಂಭವಿ ಡಾಭಾ ಬಳಿ ನಡೆದಿದೆ. ಗುರುವಾರ ಮಧ್ಯರಾತ್ರಿ ಸುಮಾರು 1 ಗಂಟೆಯ ಟೈಂನಲ್ಲಿ ಈ ಒಂದು ಅವಘಡ ಸಂಭವಿಸಿದೆ.

ಜಾಹೀರಾತು

ಮೃತ ಬೈಕ್ ಸವಾರರನ್ನ ಬೀದರ ಮೂಲದ 24 ವರ್ಷದ ಹರೀಶ ಹಾಗೂ 22 ವರ್ಷದ ಅಕ್ಷಯಕುಮಾರ ಎಂದು ಗುರುತಿಸಲಾಗಿದೆ. ಈ ಘಟನೆ ಸಂಬಂಧ ದೇವರಹಿಪ್ಪರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹೀರಾತು




Leave a Reply

Your email address will not be published. Required fields are marked *

error: Content is protected !!