ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ಬೇಕು ಈ ಆಹಾರ

278

ಪ್ರಜಾಸ್ತ್ರ ಲೈಫ್ ಸ್ಟೈಲ್

ಚಳಿಗಾಲದಲ್ಲಿ ಏನೇ ತಿನ್ನಬೇಕು, ಕುಡಿಬೇಕು ಅಂದ್ರೂ ಬಿಸಿಬಿಸಿಯಾಗಿರಬೇಕು ಎನ್ನುತ್ತೇವೆ. ಚಳಿಯಿಂದ ಬೆಚ್ಚಿಗೆ ಇರಲು ಎಷ್ಟು ಸಾಧ್ಯವೋ ಅಷ್ಟು ಪ್ರಯತ್ನ ಮಾಡ್ತೀವಿ. ಇದ್ರಿಂದ ಆರೋಗ್ಯವನ್ನ ಕಾಪಾಡಿಕೊಳ್ಳಬಹುದು. ಹೀಗಾಗಿ ಚಳಿಗಾಲದಲ್ಲಿ ಈ ಆಹಾರ ನಿಯಮಿತವಾಗಿ ಸೇವನೆ ಮಾಡುವುದು ಒಳ್ಳೆಯದು.

ಬೆಲ್ಲ ಪ್ರತಿಯೊಬ್ಬರ ಮನೆಯಲ್ಲಿ ಇರುತ್ತೆ. ಇದು ದೇಹವನ್ನ ಶುದ್ಧೀಕರಿಸುವ ಕೆಲಸ ಮಾಡುತ್ತೆ. ಹೊಟ್ಟೆ, ಶ್ವಾಸಕೋಶ, ಅನ್ನನಾಳವನ್ನ ಸ್ವಚ್ಛ ಮಾಡುತ್ತೆ. ಹೀಗಾಗಿ ಚಳಿಗಾಲದಲ್ಲಿ ಬೆಲ್ಲ ಸೇವನೆ ತುಂಬಾ ಸಹಕಾರಿ.

ಎಳ್ಳು ಉಷ್ಣತೆಯಿಂದ ಕೂಡಿದೆ. ರೋಗ ನಿರೋಧ ಶಕ್ತಿಯನ್ನ ಹೊಂದಿರುವ ಎಳ್ಳು ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಬಹುದು.

ಇನ್ನು ಶುಂಠಿ ಸಹ ದೇಹದ ಉಷ್ಣತೆ ಹೆಚ್ಚುತ್ತದೆ. ಗಂಟಲಿನ ಸೋಂಕು, ಶೀತ, ಕಫ್ ಸಮಸ್ಯೆಯನ್ನ ಕಡಿಮೆ ಮಾಡುತ್ತೆ.




Leave a Reply

Your email address will not be published. Required fields are marked *

error: Content is protected !!