ಹಿಂದೂ ಜನಜಾಗೃತಿ ಸಿಮಿತಿಯಿಂದ ತಹಶೀಲ್ದಾರ್ ಗೆ ಮನವಿ

636

ಸಿಂದಗಿ: ರಾಷ್ಟ್ರೀಯ ಪೌರತ್ವ ನೋಂದಣಿ, ಕಮಲೇಶ ತಿವಾರಿ ಹತ್ಯೆ ಹಾಗೂ ಜೆಎನ್ ಯು ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಹಶೀಲ್ದಾರ್ ಬಿ.ಎಸ್ ಕಡಕಭಾವಿ ಅವರಿಗೆ ಮನವಿ ಸಲ್ಲಿಸಲಾಯ್ತು.

‘ಎನ್ಆರ್ ಸಿ’ಯನ್ನ ರಾಷ್ಟ್ರವ್ಯಾಪಿ ಜಾರಿಗೊಳಿಸುವ ಕುರಿತು ಕೇಂದ್ರ ಗೃಹ ಸಚಿವ ಅಮಿತ ಶಾ ಪ್ರಸ್ತಾಪಿಸಿದ್ದು, ಅದನ್ನ ಅನ್ವಯಗೊಳಿಸಬೇಕು. ಉತ್ತರಪ್ರದೇಶದಲ್ಲಿನ ಹಿಂದೂ ಮಹಾಸಭೆ ಹಾಗೂ ಹಿಂದೂ ಸಮಾಜ ಪಕ್ಷದ ಅಧ್ಯಕ್ಷ ಕಮಲೇಶ ತಿವಾರಿ ಹತ್ಯೆ ಮಾಡಲಾಗಿದೆ. ಇದರ ಜೊತೆಗೆ ಅಕ್ಟೋಬರ್ ತಿಂಗಳಲ್ಲಿ ಐವರು ಹಿಂದೂಗಳನ್ನ ಯುಪಿಯಲ್ಲಿ ಹತ್ಯೆ ಮಾಡಲಾಗಿದೆ. ಈ ಕೃತ್ಯದ ಹಿಂದೆ ಇರುವವರಿಗೆ ಕಠಿಣ ಶಿಕ್ಷೆಯಾಗಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಇನ್ನು ಇತ್ತೀಚೆಗೆ ‘ಜೆಎನ್ ಯು’ನಲ್ಲಿ ನಡೆದ ಪ್ರತಿಭಟನೆ ವೇಳೆ, ವಿವೇಕಾನಂದರ ಮೂರ್ತಿ ವಿರೂಪಗೊಳಿಸಲಾಗಿದೆ. ದೇಶ ವಿರೋಧಿ ಬರಹಗಳನ್ನ ಬರೆಯಲಾಗಿದ್ದು, ಇದನ್ನ ಮಾಡಿದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯ್ತು. ಈ ವೇಳೆ ವೆಂಕಟರಮಣ, ಪ್ರತೀಕ ಪೀರಾಪುರ, ಅಶೋಕ ಅಲ್ಲಾಪುರ, ಪ್ರವೀಣಕುಮಾರ ಕುಂಟೋಜಿ, ಆನಂದ ದೇಸಾಯಿ, ಅಶೋಕ ನೆಗಿನಾಳ ಸೇರಿದಂತೆ ಹಿಂದೂ ಸಂಘಟನೆಯ ಅನೇಕ ಕಾರ್ಯಕರ್ತರು ಭಾಗವಹಿಸಿದ್ರು.




Leave a Reply

Your email address will not be published. Required fields are marked *

error: Content is protected !!