ಕೊಪ್ಪಳದಲ್ಲಿ ಕುಸಿದ ಮನೆ: ಪಾರಾದ 5 ವರ್ಷದ ಮಗು

298

ಪ್ರಜಾಸ್ತ್ರ ಸುದ್ದಿ

ಕೊಪ್ಪಳ: ಜಿಲ್ಲೆಯ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದಲ್ಲಿ ಮನೆಯೊಂದರ ಮೇಲ್ಛಾವಣಿ ಕುಸಿದಿದೆ. ಅದೃಷ್ವವಶಾತ್ 5 ವರ್ಷದ ಮಗು ಪಾರಾಗಿದೆ. ಗ್ರಾಮದ ತಿರಣೆಪ್ಪ ಓಲಿ ಎಂಬುವರ ಮನೆ ಹಿಂಭಾಗದ ಕೋಣೆ ಕುಸಿದಿದೆ. ಈ ವೇಳೆ ಅಲ್ಲಿಯೇ ಇದ್ದ 5 ವರ್ಷದ ಮಗು ಸಿಲುಕಿಕೊಂಡಿದೆ.

ಏಕಾಏಕಿ ಮೇಲ್ಛಾವಣಿ ಕುಸಿದ ಸಂದರ್ಭದಲ್ಲಿ ಮನೆಯಲ್ಲಿ ನಾಲ್ಕು ಜನರಿದ್ದು, ಕೂಗಾಡಲು ಶುರು ಮಾಡಿದ್ದಾರೆ. ತಕ್ಷಣ ಸ್ಥಳೀಯರು ಬಂದು, ಮಗುವನ್ನ ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೆ ಮನೆಯ ಮೇಲ್ಛಾವಣಿ ಕುಸಿದಿದೆ.




Leave a Reply

Your email address will not be published. Required fields are marked *

error: Content is protected !!