ಬಿಟೌನ್ ನಿರ್ದೇಶಕನ ಸಾವಿನ ಸುಳ್ ಸುದ್ದಿ

276

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬಾಲಿವುಡ್ ನಿರ್ದೇಶಕ ನಿಷಿಕಾಂತ ಕಾಮತ್ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಪತ್ರಿಕೆಯೊಂದರ ವೆಬ್ ಪೋರ್ಟಲ್ ಸುದ್ದಿ ಮಾಡಿದೆ. ಹೀಗಾಗಿ ನಿಷಿಕಾಂತ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಫೋನ್ ಮಾಡಿದ ಫಿಲ್ಮ್ ಮೇಕರ್ ಮಿಲಾಪ್, ಅವರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ ಎಂದಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಮಿಲಾಪ್, ನಿಷಿಕಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದಾರೆ ಎಂದು ಹೇಳಿದ್ದಾರೆ. ಲಿವರ್ ಸಮಸ್ಯೆಯಿಂದ ಬಳಲುತ್ತಿರುವ 50 ವರ್ಷದ ನಿಷಿಕಾಂತ ಕಾಮತ್, ಹೈದ್ರಾಬಾದ್ ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

2005ರಲ್ಲಿ ದೊಂಬಿವಾಲಿ ಫಾಸ್ಟ್ ಅನ್ನೋ ಮರಾಠಿ ಸಿನಿಮಾ ನಿರ್ದೇಶನದ ಮೂಲಕ ಚಿತ್ರರಂಗಕ್ಕೆ ನಿಷಿಕಾಂತ ಎಂಟ್ರಿಯಾದ್ರು. ಮೊದಲ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ಪಡೆದ್ರು. 2008ರಲ್ಲಿ ಮುಂಬೈ ಮೇರಿ ಜಾನ್ ಚಿತ್ರದೊಂದಿಗೆ ಬಾಲಿವುಡ್ ಎಂಟ್ರಿ ಆಯ್ತು. ಪೋರ್ಸ್, ಮದಾರಿ, ರಾಕಿ ಹ್ಯಾಂಡಸಮ್, ದೃಶ್ಯಂ ಸಿನಿಮಾಗಳಿಗೆ ಆಕ್ಷನ್ ಕಟ್ ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!