ಇಡಿ ಸಮನ್ಸ್ ನೀಡಿರುವ ಡಿಕೆಶಿ ಪುತ್ರಿ ಆಸ್ತಿ ಎಷ್ಟು ಕೋಟಿ ಗೊತ್ತಾ?

924

ಬೆಂಗಳೂರು: ಮಾಜಿ ಸಚಿವ, ಶಾಸಕ ಡಿ.ಕೆ ಶಿವಕುಮಾರ ಪುತ್ರಿಗೆ ಇದೀಗ ಇಡಿ ಸಮನ್ಸ್ ಜಾರಿ ಮಾಡಿದೆ. ಡಿಕೆಶಿ ಪುತ್ರಿ ಐಶ್ವರ್ಯ ಕೋಟ್ಯಾಂತಾರ ರೂಪಾಯಿ ವ್ಯವಹಾರ ಮಾಡಿರುವುದು ಬ್ಯಾಂಕ್ ಖಾತೆಯಿಂದ ತಿಳಿದು ಬಂದಿದೆ. ಹೀಗಾಗಿ ಸೆಪ್ಟೆಂಬರ್ 12ರಂದು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ.

ತಾಯಿ ಜೊತೆಯಿರುವ ಡಿಕೆಶಿ ಪುತ್ರಿ ಐಶ್ವರ್ಯ

ಡಿಕೆಶಿ ಪುತ್ರಿ ಐಶ್ವರ್ಯ ಹೆಸರಿನಲ್ಲಿ ‘ಐಶ್ವರ್ಯ ನ್ಯಾಷನಲ್ ಹಿಲ್ ವ್ಯೂ ಪಬ್ಲಿಕ್ ಸ್ಕೂಲ್ ಟ್ರಸ್ಟ್’ನಲ್ಲಿ ಹೂಡಿಕೆ ಇದೆ. ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿ 24 ಕೋಟಿ ಮೌಲ್ಯದ ಜಾಗವಿದೆ. ಮುಂಬೈನಲ್ಲಿ 1.2 ಕೋಟಿ ಮೌಲ್ಯದ ಫ್ಲಾಟ್ ಇದೆ. ಸೋಲ್ ಸ್ಪೇಸ್ ಪ್ರಾಜೆಕ್ಟ್ ಲಿ. ನವರಿಗೆ 76.11 ಕೋಟಿ ಸಾಲ ಕೊಟ್ಟಿದ್ದಾರೆ. 81.92 ಕೋಟಿ ರೂಪಾಯಿ ಐಶ್ವರ್ಯ ಹೆಸರಿನಲ್ಲಿ ಸಾಲವಿದೆ.

ಡಿಕೆಶಿ ಪುತ್ರಿ ಹೆಸರಿನಲ್ಲಿರುವ ಘೋಷಿತ ಆಸ್ತಿಯ ಮೌಲ್ಯ 108 ಕೋಟಿ ರೂಪಾಯಿ ಇದೆ. 2018ರ ಚುನಾವಣೆ ಟೈಂನಲ್ಲಿ ಪುತ್ರಿ ಹೆಸರಿನಲ್ಲಿರುವ ಆಸ್ತಿಯ ಬಗ್ಗೆ ಡಿಕೆಶಿ ಘೋಷಣೆ ಮಾಡಿದ್ರು.




Leave a Reply

Your email address will not be published. Required fields are marked *

error: Content is protected !!