ಹೊಯ್ಸಳ ಟೀಸರ್ ಬೆಂಕಿ ಬಿರುಗಾಳಿ

175

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಡಾಲಿ ಧನಂಜಯ್ ನಟನೆಯ 25ನೇ ಚಿತ್ರ ಹೊಯ್ಸಳ ಸಿಕ್ಕಾಪಟ್ಟೆ ಕ್ರೇಜ್ ಕ್ರಿಯೇಟ್ ಮಾಡಿದೆ. ಖಡಕ್ ಪೊಲೀಸ್ ಪಾತ್ರದಲ್ಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಗುರುದೇವ ಹೊಯ್ಸಳ ಅನ್ನೋ ಹೆಸರಿನ ಪಾತ್ರ ಕಮಾಲ್ ಮಾಡಲು ಸಜ್ಜಾಗಿದ್ದು, ಭಾನುವಾರ ಬೆಳಗ್ಗೆ 9.27ಕ್ಕೆ ಟೀಸರ್ ರಿಲೀಸ್ ಆಗಿದೆ.

50 ಸೆಕೆಂಡಿನ ಟೀಸರ್ ಚಿತ್ರದ ಬಗ್ಗೆ ಮತ್ತಷ್ಟು ಕುತೂಹಲ ಮೂಡಿಸಿದೆ. ಡಾಲಿ ಪಾತ್ರ ಬಿಟ್ಟು ಉಳಿದವರನ್ನು ಸರಿಯಾಗಿ ರಿವೀಲ್ ಮಾಡಿಲ್ಲ. ಧನಂಜಯಗೆ ಅಮೃತಾ ಅಯ್ಯಂಗಾರ ಜೋಡಿಯಾಗಿ ಕಾಣಿಸಿಕೊಂಡಿದ್ದಾರೆ. ಅಚ್ಯುತ್ ಕುಮಾರ್, ರಾಜೇಶ್ ನಟರಂಗ ಸೇರಿ ಅನೇಕರ ತಾರಾ ಬಳಗವಿದೆ.

ವಿಜಯ್.ಎನ್ ನಿರ್ದೇಶನ, ಅಜನೀಶ್ ಲೋಕನಾಥ್ ಮ್ಯೂಸಿಕ್ ಇದೆ. ಯೋಗಿ ರಾಜ್, ಕಾರ್ತಿಕ್ ಅವರು ಕೆಆರ್ ಜಿ ಸ್ಟುಡಿಯೋ ಅಡಿಯಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಜನವರಿ 30ಕ್ಕೆ ಹೊಯ್ಸಳ ಥಿಯೇಟರ್ ಗೆ ಎಂಟ್ರಿ ಕೊಡುತ್ತಿದ್ದಾನೆ.




Leave a Reply

Your email address will not be published. Required fields are marked *

error: Content is protected !!