ಖ್ಯಾತ ಗಾಯಕಿ ವಾಣಿ ಜಯರಾಮ್ ಕಣ್ಮರೆ

232

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ರಾಷ್ಟ್ರೀಯ ಪ್ರಶಸ್ತಿ ಪಡೆದ ಖ್ಯಾತ ಗಾಯಕಿ ವಾಣಿ ಜಯರಾಮ್(77) ಶನಿವಾರ ಚನ್ನೈನಲ್ಲಿ ನಿಧನ ಹೊಂದಿದ್ದಾರೆ. ಚೆನ್ನೈನಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಭರ್ಜರಿ 50 ವರ್ಷಗಳನ್ನು ಪೂರೈಯಿಸಿದ್ದರು. ಬರೋಬ್ಬರಿ 10 ಸಾವಿರ ಹಾಡುಗಳನ್ನು ಹಾಡಿದ್ದಾರೆ.

ತಮಿಳು, ತೆಲುಗು, ಕನ್ನಡ, ಹಿಂದಿ, ಮಲಯಾಳಂ, ಮರಾಠಿ ಸೇರಿದಂತೆ 19 ಭಾಷೆಗಳಲ್ಲಿ ತಮ್ಮ ಗಾನ ಸುಧೆ ಹರಿಸಿದ್ದಾರೆ. ಮೂರು ಬಾರಿ ರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ. ಆಂಧ್ರಾ, ತಮಿಳುನಾಡು, ಓಡಿಶಾ, ಗುಜರಾತ್ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.

ಸಂಗೀತ ಕ್ಷೇತ್ರದಲ್ಲಿ ಇವರು ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಭಾರತ ಸರ್ಕಾರ ದೇಶದ 3ನೇ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಪದ್ಮಭೂಷಣ ಘೋಷಿಸಿದೆ. ಇದನ್ನು ಸ್ವೀಕರಿಸುವ ಮೊದಲೇ ಕಣ್ಮರೆಯಾಗಿದ್ದು, ಚಿತ್ರರಂಗ ಸೇರಿದಂತೆ ಅವರ ಅಭಿಮಾನಿಗಳಿಗೆ ಸಾಕಷ್ಟು ನೋವು ತಂದಿದೆ.




Leave a Reply

Your email address will not be published. Required fields are marked *

error: Content is protected !!