ನಾನು ವೇಶ್ಯಾವಾಟಿಕೆ ಪ್ರಕರಣದಲ್ಲಿ ಭಾಗಿಯಾಗಿಲ್ಲ: ನಟ ಸ್ಪಷ್ಟನೆ

130

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಮೊಬೈಲ್ ಆಪ್ ಮೂಲಕ ವೇಶ್ಯಾವಾಟಿಕೆ ದಂಧೆ ಮಾಡುತ್ತಿದ್ದ ಹಾಗೂ ಜನರಿಗೆ ಮೋಸ ಮಾಡಿ ಹಣ ವಸೂಲಿ ಮಾಡುತ್ತಿದ್ದ 6 ಜನರ ತಂಡವನ್ನು ಸುದ್ದುಗುಂಟೆಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಕನ್ನಡದ ನಟ ಮಂಜುನಾಥ್ ಇದರಲ್ಲಿ ಇದ್ದಾರೆ ಎಂದು ಸುದ್ದಿಯಾಗಿತ್ತು. ಇದಕ್ಕೆ ನಟ ಸ್ಪಷ್ಟನೆ ನೀಡಿದ್ದಾರೆ.

ನಾನು ಯಾವುದೇ ವೇಶ್ಯಾವಾಟಿಕೆಯಲ್ಲಿ ಭಾಗಿಯಾಗಿಲ್ಲ. ನನ್ನಂತೆ ಹೋಲುವ ಸಂಜು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಮಾಧ್ಯಮಗಳಲ್ಲಿ ನನ್ನ ಹೆಸರು ಬಂದಿದೆ. ಇದರಿಂದಾಗಿ ನನಗೆ ಶಾಕ್ ಆಗಿದೆ. ಸ್ನೇಹಿತರು, ಸಂಬಂಧಿಕರು ಫೋನ್ ಮಾಡಿ ವಿಚಾರಿಸಿದರು. ನಾನು ಮನೆಯಲ್ಲಿಯೇ ಇದ್ದೇನೆ. ನನ್ನನ್ನು ಬಂಧಿಸಿಲ್ಲ. ಅವನು ನಾನಲ್ಲ ಎಂದು ನ್ಯೂರಾನ್ ಚಿತ್ರದ ನಟ ಮಂಜುನಾಥ್ ಹೇಳಿದ್ದಾರೆ.

ಮೊಬೈಲ್ ಆಪ್ ಮೂಲಕ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಂಜುನಾಥ್, ಮಲ್ಲಿಕಾರ್ಜುನ್ಯ, ಮೋಹನ್, ಹನುಮೇಶ್, ರಾಜೇಶ್, ಮಂಜುನಾಥ್ ಅನ್ನೋ 6 ಜನರನ್ನು ಬಂಧಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!