ಶಾಲೆಗಳಲ್ಲಿ ಪೋಕ್ಸೋ ಕಾಯ್ದೆ ಅನುಷ್ಠಾನಕ್ಕೆ ಸೂಚನೆ

183

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ರಾಜ್ಯದ ಪ್ರತಿಯೊಂದು ಶಾಲೆಯಲ್ಲಿ ಪೋಕ್ಸೋ ಕಾಯ್ದೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವಂತೆ ಶಿಕ್ಷಣ ಇಲಾಖೆ ಸೂಚನೆ ಹೊರಡಿಸಿದೆ. ಮಕ್ಕಳ ಸುರಕ್ಷತಾ ದೃಷ್ಟಿಯಿಂದ ಸಮಿತಿ ರಚಿಸುವಂತೆ ಸೂಚಿಸಲಾಗಿದೆ.

ಪ್ರತಿ ಶಾಲೆಯಲ್ಲಿ ಮಕ್ಕಳ ಸಹಾಯವಾಣಿ 1098 ಹಾಗೂ 14499 ಟೋಲ್ ಫ್ರೀ ನಂಬರ್ ಬರೆಸುವುದು, ದೂರು ಹಾಗೂ ಸಲಹಾ ಪಟ್ಟಿಗೆಯನ್ನು ಸ್ಥಾಪಿಸುವುದು, ಶಾಲಾ ಅವಧಿ ಹಾಗೂ ತರಗತಿ ವೇಳಾಪಟ್ಟಿಯನ್ನು ಪೋಷಕರಿಗೆ ನೀಡಬೇಕು ಎಂದು ತಿಳಿಸಿದೆ.

ಮಕ್ಕಳ ಸುರಕ್ಷತಾ ಸಮಿತಿಯಲ್ಲಿ ಶಾಲಾ ಮುಖ್ಯಸ್ಥರು, ಶಾಲೆಯ ಆಡಳಿತ ಮಂಡಳಿ ಈ ಸಮಿತಿ ಅಧ್ಯಕ್ಷರಾಗಿದ್ದು, ಕನಿಷ್ಟ ಇಬ್ಬರು ಶಿಕ್ಷಕರು, ಮೂವರು ಪೋಷಕರು, ಎಸ್ ಡಿಎಂಸಿ ಅಧ್ಯಕ್ಷರು, ಇಬ್ಬರು ಮಕ್ಕಳು, ಒಬ್ಬರು ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಇರಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ.




Leave a Reply

Your email address will not be published. Required fields are marked *

error: Content is protected !!