Search

ಪೋಕ್ಸೋ ಕಾಯ್ದೆ: ಗೌಪ್ಯತೆ ವಿಚಾರದಲ್ಲಿ ಪೊಲೀಸ್ ಇಲಾಖೆ ಮತ್ತು ಮಾಧ್ಯಮ ಯಡವುತ್ತಿದ್ಯಾ?

917

ಪ್ರಜಾಸ್ತ್ರ ವಿಶೇಷ ವರದಿ

ಬೆಂಗಳೂರು: 2012ರಲ್ಲಿ ಕೇಂದ್ರ ಸರ್ಕಾರ ಪೋಕ್ಸೋ ಕಾಯ್ದೆಯನ್ನ ಜಾರಿಗೆ ತಂದಿತು. ಈ ಮೂಲಕ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯವನ್ನ ತಡೆಯುವುದು ಹಾಗೂ ಕಾಮಿಕ್ರೂರಿಗಳಿಗೆ ಶಿಕ್ಷೆ ನೀಡುವುದಾಗಿದೆ. ಇದರಲ್ಲಿ ಪ್ರಮುಖವಾಗಿ ಮಕ್ಕಳ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಅಶ್ಲೀಲ ಭಾಷೆ ಸೇರಿದಂತೆ ಕೆಲ ಪ್ರಮುಖ ವಿಚಾರಗಳನ್ನ ಸೇರಿಸಲಾಗಿದೆ.

ಇದರ ಜೊತೆಗೆ ಅಪ್ರಾಪ್ತೆ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ, ಕಿರುಕುಳ ನಡೆದಿರುವ ಕುರಿತು ದಾಖಲಾಗುವ ಪ್ರಕರಣಗಳಲ್ಲಿ, ಗೌಪ್ಯತೆ ಅನ್ನೋದು ತುಂಬಾ ಮುಖ್ಯವಾಗಿದೆ. ಯಾಕಂದ್ರೆ, ಅದು ಆ ಮುಗುವಿನ ಭವಿಷ್ಯದ ವಿಚಾರವಾಗಿದೆ. ಹೀಗಾಗಿ ಪೊಲೀಸ್ ಇಲಾಖೆ ಈ ವಿಚಾರದಲ್ಲಿ ಕಟ್ಟುನಿಟ್ಟಾಗಿ ಗೌಪ್ಯತೆ ಕಾಪಾಡಬೇಕಾಗಿದೆ. ಆದ್ರೆ, ಇದಾಗ್ತಿಲ್ಲ.

ಗೌಪ್ಯತೆ ಕಾಪಾಡುವಲ್ಲಿ ಪೊಲೀಸ್ ಇಲಾಖೆ ಯಡವುತ್ತಿದ್ಯಾ?

ಇನ್ನು ಪೋಕ್ಸೋ ಕಾಯ್ದೆ ಕಲಂ 23ರ ಅನ್ವಯ ಗೌಪ್ಯತೆ ಕಾಪಾಡದವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದಾಗಿದೆ. ಆದ್ರೆ, ಪೊಲೀಸ್ ಇಲಾಖೆ ಪೋಕ್ಸೋ ಕಾಯ್ದೆ ಅಡಿ ದಾಖಲಾದ ಪ್ರಕರಣಗಳ ವಿವರವನ್ನ ಬಹಿರಂಗ ಪಡಿಸ್ತಿರುವುದು ಆಗಾಗ ಬೆಳಕಿಗೆ ಬರ್ತಿದೆ. ಹೀಗಾಗಿ ರಾಷ್ಟ್ರೀಯ ಮಕ್ಕಳು ಹಕ್ಕುಗಳ ಆಯೋಗ ಆಕ್ರೋಶ ವ್ಯಕ್ತಪಡಿಸ್ತಿದೆ. ಈ ಬಗ್ಗೆ ರಾಜ್ಯಗಳ ಪೊಲೀಸ್ ಇಲಾಖೆಗಳಿಗೆ ಪತ್ರ ಬರೆದು, ಗೌಪ್ಯತೆ ಕಾಪಾಡದ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವಂತೆ ಹೇಳಿದೆ. ಆದ್ರೆ, ಇದು ಪಾಲನೆಯಾಗದೆ ಅನ್ಯಾಯಕ್ಕೆ ಒಳಗಾದ ಅಪ್ರಾಪ್ತೆಗೆ ನ್ಯಾಯ ಸಿಗುವಲ್ಲಿ ವಿಫಲವಾಗ್ತಿದೆ ಈ ವ್ಯವಸ್ಥೆ.

ಜವಾಬ್ದಾರಿ ಮರೆತು ವರ್ತಿಸ್ತಿದ್ಯಾ ಮಾಧ್ಯಮ?

ಇನ್ನು ಪೋಕ್ಸೋ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಮುದ್ರಣ, ದೃಶ್ಯ ಮಾಧ್ಯಮ ಸೇರಿದಂತೆ ಸುದ್ದಿ ಸಂಸ್ಥೆಗಳಿಗೆ ಈ ಹಿಂದೆಯೇ ಸೂಚನೆ ನೀಡಲಾಗಿದೆ. ಮಗುವಿನ ವೈಯಕ್ತಿಕ ವಿವರ ಬಹಿರಂಗ ಪಡಿಸುವ ರೀತಿಯಲ್ಲಿ ಸುದ್ದಿ ಮಾಡುವುದು, ವಿಡಿಯೋ ತೋರಿಸುವುದು ಮಾಡಿದ್ರೆ, ವರದಿಗಾರ, ಸುದ್ದಿ ಬರೆದವರು, ಮಾಲೀಕ ಹಾಗೂ ಪ್ರಕಾಶಕರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳುವ ಅಧಿಕಾರವಿದೆ. ಆದ್ರೆ, ಪೋಕ್ಸೋ ಬಗ್ಗೆ ಸರಿಯಾಗಿ ತಿಳಿದುಕೊಳ್ಳದ ಕೆಲ ವರದಿಗಾರರು, ಮಾಧ್ಯಮ ಸಂಸ್ಥೆಗಳು ಸುದ್ದಿ ಕೊಡುವ ಆತುರದಲ್ಲಿ ವರದಿ ಮಾಡ್ತಿವೆ. ಹೀಗಾಗಿ ಇವರಿಗೆ ಆ ಅಪ್ರಾಪ್ತೆಯ ಮುಂದಿನ ಜೀವನದ ಮೇಲೆ ಏನು ಪರಿಣಾಮ ಬೀರುತ್ತೆ, ಇದನ್ನ ಓದುವ, ನೋಡುವ ಮಕ್ಕಳ ಮನಸ್ಥಿತಿ ಮೇಲೆನಾಗುತ್ತೆ ಅನ್ನೋ ಪರಿಜ್ಞಾನ ಇಲ್ಲ ಅನ್ನೋದು ಗೊತ್ತಾಗುತ್ತೆ.

ಗೌಪ್ಯತೆಯಲ್ಲಿ ಏನಿದೆ?

ಮಗುವಿನ ಫೋಟೋ, ಹೆಸರು, ವಿಳಾಸ ನೀಡುವಂತಿಲ್ಲ

ಕುಟುಂಬದ ಹಿನ್ನೆಲೆ, ಅವರ ವಾಸಸ್ಥಳ, ಶಾಲೆ ಬಗ್ಗೆ ಹೇಳುವಂತಿಲ್ಲ

ಆ ಮಗುವಿನ ಮನೆಯ ನೆರೆ ಹೊರೆಯವರ ಬಗ್ಗೆಯೂ ಸಹ ತಿಳಿಸುವಂತಿಲ್ಲ

ತನಿಖಾಧಿಕಾರಿ ಮಗುವಿನ ವ್ಯಯಕ್ತಿಕ ವಿವರ, ಅಭಿಪ್ರಾಯ, ಸಲಹೆ ಸಹ ನೀಡುವಂತಿಲ್ಲ

ಮಗುವಿನ ಹಿತದೃಷ್ಟಿಯಿಂದ ಕೋರ್ಟ್ ಅನುಮತಿ ನೀಡಿದ್ರೆ ವಿವರಗಳನ್ನ ನೀಡಬಹುದು

ನಿಯಮ ಉಲ್ಲಂಘಿಸಿದ್ರೆ ಪೋಕ್ಸೋ ಕಾಯ್ದೆ ಸಬ್ ಸೆಕ್ಷನ್(1) ಹಾಗೂ (2)ರ ಅನ್ವಯ ಶಿಕ್ಷಾರ್ಹ ಅಪರಾಧ

ಆದ್ರೆ, ಇದ್ಯಾವುದನ್ನೂ ಪಾಲಿಸದೆ ಕೆಲವು ಕೇಸ್ ಗಳಲ್ಲಿ ಪೊಲೀಸ್ ಇಲಾಖೆಯಿಂದ ಮಾಹಿತಿ ಸೋರಿಕೆಯಾಗ್ತಿದೆ. ಮಾಹಿತಿ ಸಿಕ್ಕ ತಕ್ಷಣ ಮಾಧ್ಯಮ ವರದಿಗಾರರು ಹಿಂದುಮುಂದು ನೋಡದೆ ಸುದ್ದಿ ಮಾಡ್ತಿದ್ದಾರೆ. ಕಾರಣ, ಜನಕ್ಕೆ ಇದರ ಬಗ್ಗೆ ತಿಳುವಳಿಕೆ ಇಲ್ಲ. 8 ವರ್ಷಗಳ ಹಿಂದೆಯೇ ಬಂದ ಕಾಯ್ದೆ ಜನರಿಗೆ ಸರಿಯಾಗಿ ಅರ್ಥವಾಗಿಲ್ಲ. ಅದನ್ನ ಅರ್ಥ ಮಾಡಿಕೊಳ್ಳುವ ಪ್ರಯತ್ನ ಸಹ ಮಾಡ್ತಿಲ್ಲ. ಹೀಗಾಗಿ ಗೌಪ್ಯತೆ ಕಾಪಾಡಿಕೊಳ್ಳಬೇಕಾದ ವಿಷಯವೂ ಬಹಿರಂಗವಾಗ್ತಿರುವುದು.




Leave a Reply

Your email address will not be published. Required fields are marked *

error: Content is protected !!