ನ್ಯೂಜಿಲೆಂಡ್ ಮುಡಿಗೆ ಡಬ್ಲುಟಿಸಿ ಕಿರೀಟ

271

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಭಾರತದ ವಿರುದ್ಧ 8 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಟೆಸ್ಟ್ ಚಾಂಪಿಯನ್ ಆಗಿದೆ. ಮಳೆಯಿಂದಾಗಿ ಒಂದು ದಿನ ಹಾಳಾದ ಕಾರಣ 6 ದಿನಗಳ ಕಾಲ ಪಂದ್ಯ ನಡೆಯಿತು.

ಟಾಸ್ ಗೆದ್ದು ಬೌಲಿಂಗ್ ತೆಗೆದುಕೊಂಡ ಕೇನ್ ವಿಲಿಯಮ್ಸನ್ ಟೀಂ, ಮೊದಲ ಇನ್ನಿಂಗ್ಸ್ ನಲ್ಲಿ ಭಾರತವನ್ನ 217ರನ್ ಗಳಿಗೆ ಕಟ್ಟಿ ಹಾಕಿತು. ಬಳಿಕ ನ್ಯೂಜಿಲೆಂಡ್ ತಂಡವನ್ನ ಕೊಹ್ಲಿ ಪಡೆ 249 ರನ್ ಗಳಿಗೆ ಆಲೌಟ್ ಮಾಡಿತು. ಹೀಗಾಗಿ 32 ರನ್ ಗಳ ಮುನ್ನಡೆ ಸಾಧಿಸಿತ್ತು. ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 170 ರನ್ ಗಳಿಗೆ ಆಲೌಟ್ ಆಗುವ ಮೂಲಕ ಕೇವಲ 139 ರನ್ ಗಳ ಟಾರ್ಗೆಟ್ ನೀಡಿತು.

ರಿಷಬ್ ಪಂತ್ 41 ಹಾಗೂ ರೋಹಿತ ಶರ್ಮಾ 30 ರನ್ ಹೆಚ್ಚು ರನ್ ಗಳಿಸಿದ ಆಟಗಾರರು. ಅನುಭವಿ ಸೌಥಿ ಹಾಗೂ ಬೋಲ್ಡ್ ಬೌಲಿಂಗ್ ಮುಂದೆ ಕೊಹ್ಲಿ ಪಡೆ ರನ್ ಗಳಿಸುವಲ್ಲಿ ವಿಫಲವಾಯ್ತು. ಸೌಥಿ 4, ಬೋಲ್ಟ್ 3, ಜೇಮ್ಸನ್ 2 ಹಾಗೂ ವಾಗ್ನರ್ 1 ವಿಕೆಟ್ ಪಡೆದರು.

2ನೇ ಇನ್ನಿಂಗ್ಸ್ ಶುರು ಮಾಡಿದ ನ್ಯೂಜಿಲೆಂಡ್ ಕ್ಯಾಪ್ಟನ್ ವಿಲಿಯಮ್ಸನ್ 52, ಟೇಲರ್ 47 ರನ್ ಗಳ ಆಟದಿಂದ 2 ವಿಕೆಟ್ ನಷ್ಟಕ್ಕೆ 140 ರನ್ ಗಳಿಸಿ 8 ವಿಕೆಟ್ ಗಳ ಅಂತರದಿಂದ ಗೆಲುವು ಸಾಧಿಸಿದರು. ರವಿಚಂದ್ರನ್ ಅಶ್ವಿನ್ 2 ವಿಕೆಟ್ ಪಡೆದರು.

ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದ ಶೆಮಿ, 3 ವಿಕೆಟ್ ಪಡೆ ಇಶಾಂತ್ 2ನೇ ಇನ್ನಿಂಗ್ಸ್ ನಲ್ಲಿ ಕಮಾಲ್ ಮಾಡಲು ಸಾಧ್ಯವಾಗ್ಲಿಲ್ಲ. ಮಳೆಯಿಂದಾಗಿ ಆಟ ಸಾಕಷ್ಟು ಏರುಪೇರು ಆಗದ್ದರೂ ಫಲಿತಾಂಶ ಬಂದಿತು. ಆದ್ರೆ, ಭಾರತ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಸೆ ಆಯ್ತು.




Leave a Reply

Your email address will not be published. Required fields are marked *

error: Content is protected !!