ಏಷ್ಯಾ ಕಪ್ 2022: ಅಗ್ರ ಸ್ಥಾನದಲ್ಲಿ ಭಾರತ

232

ಪ್ರಜಾಸ್ತ್ರ ಕ್ರೀಡಾ ಸುದ್ದಿ

ದುಬೈ: ಏಷ್ಯಾ ಕಪ್ 2022 ಟೂರ್ನಿಯಲ್ಲಿ ಭಾರತ ಅಗ್ರ ಸ್ಥಾನದಲ್ಲಿದೆ. ಬುಧವಾರ ಹಾಂಗ್ ಕಾಂಗ್ ವಿರುದ್ಧ ಆಡಿದ ಪಂದ್ಯದಲ್ಲಿ 40 ರನ್ ಗಳ ಅಂತರದಿಂದ ಗೆಲುವು ಸಾಧಿಸಿದೆ. ಇದರೊಂದಿಗೆ ಸತತ ಎರಡು ಪಂದ್ಯಗಳನ್ನು ಗೆದ್ದು ಸೂಪರ್ ಫೋರ್ ಹಂತಕ್ಕೆ ಹೋಗಿದೆ.

ಟಾಸ್ ಗೆದ್ದ ಬೌಲಿಂಗ್ ಆಯ್ಕೆ ಮಾಡಿಕೊಂಡ ಹಾಂಗ್ ಕಾಂಗ್ ತಂಡದ ನಾಯಕ ನಿಝಕತ್ ಖಾನ್ ಲೆಕ್ಕಾಚಾರವನ್ನು, ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಯಾದವ್ ಉಲ್ಟಾ ಮಾಡಿದರು. ಕೊಹ್ಲಿ ಅಜೆಯ 59, ಸೂರ್ಯಕುಮಾರ್ ಅಜೆಯ 68, ಕೆ.ಎಲ್ ರಾಹುಲ್ 36 ರನ್ ಗಳಿಂದಾಗಿ 192 ರನ್ ಗಳಿಸಿತು.

ಕೊಹ್ಲಿ 3 ಸಿಕ್ಸ್ ಬಾರಿಸಿದರೆ, ಯಾದವ್ 6 ಸಿಕ್ಸ್, 6 ಫೋರ್ ಬಾರಿಸಿದರು. ಹೀಗಾಗಿ ಡೆತ್ ಓವರ್ ಆದ 16ರಿಂದ 20 ಓವರ್ ನಲ್ಲಿ ಬರೋಬ್ಬರಿ 78 ರನ್ ಗಳಿಸಿದರು. ಹಾಂಕ್ ಕಾಂಗ್ ಪರ ಆಯುಷ್ ಶುಕ್ಲಾ 1 ಹಾಗೂ ಮೊಹಮ್ಮದ್ ಗಜ್ನಾಫರ್ 1 ವಿಕೆಟ್ ಪಡೆದರು.

192 ರನ್ ಚೇಸ್ ಮಾಡಿದ ಹಾಂಗ್ ಕಾಂಗ್ 5 ವಿಕೆಟ್ ಗೆ 152 ರನ್ ಗಳಿಸಿ ಸೋಲು ಅನುಭವಿಸಿತು. ಇದರಲ್ಲಿ ಬಾಬರ್ ಹಯತ್ 41,  ಕಿನ್ ಚಾಟ್ ಶಹಾ 30, ಝಿಸಾನ್ ಅಲಿ 26 ರನ್ ಗಳಿಸಿದರು. ಭಾರತ ಪರ ಭುವನೇಶ್ವರ್ ಕುಮಾರ್, ರವೀಂದ್ರ ಜಡೇಜಾ, ಆವೀಶ್ ಖಾನ್, ಅರ್ಸದೀಪ್ ಸಿಂಗ್ ತಲಾ 1 ವಿಕೆಟ್ ಪಡೆದರು.




Leave a Reply

Your email address will not be published. Required fields are marked *

error: Content is protected !!