ಜೀಪ್-ಟ್ರ್ಯಾಕ್ಟರ್ ಅಪಘಾತ: 7 ಜನರ ದುರ್ಮರಣ

146

ಪ್ರಜಾಸ್ತ್ರ ಸುದ್ದಿ

ಖಗಾರಿಯಾ: ಟ್ರ್ಯಾಕ್ಟರ್ ಹಾಗೂ ಜೀಪ್ ನಡುವೆ ಅಪಘಾತ ಸಂಭವಿಸಿ ಮೂವರು ಮಕ್ಕಳು ಸೇರಿ 7 ಜನರು ಮೃತಪಟ್ಟ ಘಟನೆ ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ನಡೆದಿದೆ. 6 ಜನರು ಗಾಯಗೊಂಡಿದ್ದಾರೆ.

ಮದುವೆ ಸಮಾರಂಭ ಮುಗಿಸಿಕೊಂಡು ಜೀಪಿನಲ್ಲಿ ಹೊರಟಿದ್ದಾಗ ಸೋಮವಾರ ಮುಂಜಾನೆ ಸುಮಾರು 6.30ರ ಸಮಯದಲ್ಲಿ ಅಪಘಾತ ನಡೆದಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದರು.




Leave a Reply

Your email address will not be published. Required fields are marked *

error: Content is protected !!