ಕಲ್ಯಾಣ ಕರ್ನಾಟಕ ಉತ್ಸವಕ್ಕೆ ಚಾಲನೆ

230

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ, ಜಾನಪದ ಸೇರಿದಂತೆ ಭವ್ಯ ಪರಂಪರೆಯನ್ನು ತಿಳಿಸಿಕೊಡುವ ಕಲ್ಯಾಣ ಉತ್ಸವ-2023ಕ್ಕೆ ಶಾಸಕ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಡೊಳ್ಳು ಬಾರಿಸಿ ಚಾಲನೆ ನೀಡಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ 3 ದಿನಗಳ ಕಾಲ ಉತ್ಸವ ನಡೆಯಲಿದೆ. ನಗರದ ಎಸ್.ಎಂ ಪಂಡಿತ ರಂಗಮಂದಿರದಿಂದ ಮೆರವಣಿಗೆ ಸಾಗಿ ವಿಶ್ವವಿದ್ಯಾಲಯ ತಲುಪಲಿದೆ. ಇದರಲ್ಲಿ ವಿವಿಧ ರೀತಿ ಕಲಾತಂಡಗಳು ಭಾಗವಹಿಸಿದ್ದು, ಉತ್ಸವದ ಮೆರಗು ಹೆಚ್ಚಿಸಿವೆ.

3 ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸಿನಿರಂಗದ ಅನೇಕರು ಭಾಗವಹಿಸಲಿದ್ದಾರೆ. ಜಾನಪದ ಸಾಹಿತ್ಯ, ಗಜಲ್, ಹಿರಿಯ, ಕಿರಿಯರ ಕವಿಗೋಷ್ಠಿ ಸೇರಿದಂತೆ ಹಲವು ಗೋಷ್ಠಿಗಳನ್ನು ಆಯೋಜನೆ ಮಾಡಲಾಗಿದೆ. ಇದರಲ್ಲಿ ನಾಡಿನ ಬೇರೆ ಬೇರೆ ಭಾಗದ ಬರಹಗಾರರು ಭಾಗವಹಿಸಲಿದ್ದಾರೆ.




Leave a Reply

Your email address will not be published. Required fields are marked *

error: Content is protected !!