ಕಾಂಗ್ರೆಸ್ ನಿಂದ 10 ಕೆಜಿ ಅಕ್ಕಿ ಘೋಷಣೆ

180

ಪ್ರಜಾಸ್ತ್ರ ಸುದ್ದಿ

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಈಗಾಗ್ಲೇ 2 ಯೋಜನೆಗಳನ್ನು ಘೋಷಿಸಿದೆ. ಪ್ರತಿ ತಿಂಗಳು 200 ಯುನಿಟ್ ವಿದ್ಯುತ್ ಉಚಿತ, ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಮಹಿಳೆಗೆ 2 ಸಾವಿರ ರೂಪಾಯಿ ನೀಡುವುದಾಗಿ ಘೋಷಿಸಿದೆ. ಈಗ ಪ್ರತಿ ಬಡ ಕುಟುಂಬಕ್ಕೆ ತಿಂಗಳಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಘೋಷಿಸಿದೆ.

ಶುಕ್ರವಾರ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಕಾಂಗ್ರೆಸ್ ನಾಯಕರು, ಕಾಂಗ್ರೆಸ್ ನ 3ನೇ ಗ್ಯಾರೆಂಟಿ ಪ್ರತಿ ತಿಂಗಳು ಬಡ ಕುಟುಂಬಕ್ಕೆ 10 ಕೆಜಿ ಅಕ್ಕಿ ನೀಡಲಾಗುವುದು. ಈ ಮೂಲಕ ಬಿಜೆಪಿ ಸರ್ಕಾರ 5 ಕೆಜಿಗೆ ಇಳಿಕೆ ಮಾಡಿರುವ ನಮ್ಮ ಹಿಂದಿನ ಅನ್ನಭಾಗ್ಯ ಯೋಜನೆಯನ್ನು ಮತ್ತೆ ಪ್ರಾರಂಭಿಸಿ 10 ಕೆಜಿ ನೀಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ ಮಾತನಾಡಿ ಅಧಿವೇಶನದ ಕೊನೆಯ ದಿನ. ಬಿಜೆಪಿಯ ದಿನಗಳು ಮುಗಿಯುತ್ತಿವೆ. ಸಿದ್ದರಾಮಯ್ಯನವರ ಸರ್ಕಾರದಲ್ಲಿ 2013ರಲ್ಲಿ ಅನ್ನಭಾಗ್ಯ ಯೋಜನೆ ಬರಲಾಯಿತು. ಈಗಾಗ್ಲೇ 2 ಗ್ಯಾರೆಂಟಿಗಳನ್ನು ಹೇಳಿದ್ದೇವೆ. ಪ್ರಜಾಧ್ವನಿ ಸಮಯದಲ್ಲಿ ಜನರು ತಮ್ಮ ಸಮಸ್ಯೆಗಳನ್ನು ಹೇಳಿದ್ದಾರೆ. 7 ಕೆಜಿ ಕೊಡುತ್ತಿದ್ದ ಅಕ್ಕಿಯನ್ನು 5 ಕೆಜಿಗೆ ಇಳಿಸಿದ್ದು ತೊಂದರೆಯಾಗುತ್ತಿದೆ. ಈಗ 3ನೇ ಗ್ಯಾರೆಂಟಿ ನೀಡುತ್ತಿದ್ದೇವೆ. ಜನರ ಹಸಿವು ನೀಗಬೇಕು. ಕುಟುಂಬಕ್ಕೆ ಶಕ್ತಿ ನೀಡಬೇಕು ಅನ್ನೋ ಕಾರಣಕ್ಕೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತವಾಗಿ ಪ್ರತಿ ತಿಂಗಳು 10 ಕೆಜಿ ಅಕ್ಕಿ ನೀಡಲಿದ್ದೇವೆ ಎಂದರು.

ಈ ವೇಳೆ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ, ರೇವು ನಾಯಕ, ಭೀಮಾ ನಾಯಕ ಸೇರಿ ಅನೇಕರು ಹಾಜರಿದ್ದರು.




Leave a Reply

Your email address will not be published. Required fields are marked *

error: Content is protected !!