ಜಯಂತಿಗಳು ರಾಷ್ಟ್ರೀಯ ಪರಿಕಲ್ಪನೆಯಾಗಬೇಕು: ಡಾ.ಅರವಿಂದ ಮನಗೂಳಿ

855

ಸಿಂದಗಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕನಕದಾಸರ 532ನೇ ಜಯಂತಿಯನ್ನ ಆಚರಿಸಲಾಯ್ತು. ತಾಲೂಕು ಆಡಳಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಸಂತ ಶ್ರೇಷ್ಠ ಶ್ರೀ ಭಕ್ತ ಕನಕದಾಸರ ಜಯಂತಿಯನ್ನ ಆಚರಿಸಲಾಯ್ತು.

ಉತ್ತರ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ ಹಿನ್ನೆಲೆಯಲ್ಲಿ ಸರಳವಾಗಿ ಕನಕದಾಸರ ಜಯಂತಿ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಕನಕದಾಸರ ಫೋಟೋಗೆ ಪುಷ್ಪಾರ್ಚನೆ ಮಾಡಿದ ಬಳಿಕ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ಬಳಿಕ ತಹಶೀಲ್ದಾರ್ ಬಿ.ಎಸ್. ಕಡಕಬಾವಿ ಪ್ರಸ್ತಾವಿಕವಾಗಿ ಮಾತ್ನಾಡಿ, ತಾಲೂಕು ಆಡಳಿತ ವತಿಯಿಂದ ಎಲ್ಲರಿಗೂ ಸ್ವಾಗತ ಕೋರಿದ್ರು.

ಇದೇ ವೇಳೆ ಉಪನ್ಯಾಸ ನೀಡಿದ ಎಂ.ಸಿ ಮನಗೂಳಿ ಕಾಲೇಜಿನ ಪ್ರಾಧ್ಯಾಪಕ ಡಾ.ಅರವಿಂದ ಎಂ ಮನಗೂಳಿ, ಜಯಂತಿಗಳು ಜಾತಿಗೆ ಸಿಮೀತವಾಗದೇ ರಾಷ್ಟ್ರೀಯ ಪರಿಕಲ್ಪನೆಯಾಗಬೇಕು ಅಂತಾ ಹೇಳಿದ್ರು. ಜೊತೆಗೆ ಕನಕದಾಸರ ತತ್ವಾದರ್ಶಗಳನ್ನ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಅಂತಾ ಹೇಳಿದ್ರು.

ಎಪಿಎಂಸಿ ಅಧ್ಯಕ್ಷ ಹಳ್ಳೆಪ್ಪಗೌಡ ಸಾಹೇಬಗೌಡ ಚೌದ್ರಿ, ತಾಲೂಕು ಪಂಚಾಯ್ತಿ ಉಪಾಧ್ಯಕ್ಷೆ ಲಲಿತಾ ಜೆ ದೊಡಮನಿ, ನೌಕರ ಸಂಘದ ತಾಲೂಕು ಶಾಖೆಯ ಅಧ್ಯಕ್ಷ ಅಶೋಕ ತೆಲ್ಲೂರ, ಸಿಪಿಐ ಸತೀಶಕುಮಾರ ಕಾಂಬಳೆ, ಪುರಸಭೆ ಮುಖ್ಯಾಧಿಕಾರಿ ಸಯೀದ ಅಹ್ಮದ, ಬಿಇಒ ನಗನೂರ, ತಾಲೂಕು ಕುರುಬರ ಸಂಘದ ಅಧ್ಯಕ್ಷ ಶರಣಪ್ಪ ಹಿರೇಕುರುಬರ ಸೇರಿದಂತೆ ಅನೇಕರು ಭಾಗವಹಿಸಿದ್ರು.

ಜಾಹೀರಾತು



Leave a Reply

Your email address will not be published. Required fields are marked *

error: Content is protected !!