ಕತ್ವಾ ಕೃತ್ಯದ ತೀರ್ಪು ಇಂದು

429

ಜಮ್ಮು-ಕಾಶ್ಮೀರ್: ಇಡೀ ದೇಶವನ್ನ ಬೆಚ್ಚಿಬೀಳಿಸಿದ ಕತ್ವಾದ 8 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆಗೆ ಸಂಬಂಧಿಸಿದ ತೀರ್ಪು ಇಂದು ಹೊರಬರುತ್ತೆ. ಜಮ್ಮು ಮತ್ತು ಕಾಶ್ಮೀರದ ವಿಶೇಷ ನ್ಯಾಯಾಲದಿಂದ ತೀರ್ಪು ಹೊರಬೀಳಲಿದೆ. ಹೀಗಾಗಿ ಕೋರ್ಟ್ ಸುತ್ತಮುತ್ತ ಸೂಕ್ತ ಭದ್ರತೆಯನ್ನ ಒದಗಿಸಲಾಗಿದೆ.

15 ಪುಟಗಳ ಚಾರ್ಜ್ ಶೀಟ್ ನಲ್ಲಿ 8 ವರ್ಷದ ಬಾಲಕಿಯನ್ನ ಅಪಹರಿಸಿ ಅತ್ಯಾಚಾರವೆಸಗಿ ನಂತರ ಕೊಲೆ ಮಾಡಲಾಗಿದೆ ಅನ್ನೋ ಮಾಹಿತಿ ಇದೆ. ಜನವರಿ 10, 2018 ರಂದು ಈ ಘಟನೆ ನಡೆದಿದೆ. ಕತ್ವಾ ಜಿಲ್ಲೆಯ ಸಣ್ಣ ದೇಗುಲದಲ್ಲಿ ಈ ಕೃತ್ಯವನ್ನ ಎಸಗಲಾಗಿತ್ತು. ಇದು ಇಡೀ ದೇಶದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ದೇಶದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ವರ್ಷದ ಬಳಿಕ ಇಂದು ತೀರ್ಪು ಬರ್ತಿದೆ.


TAG


Leave a Reply

Your email address will not be published. Required fields are marked *

error: Content is protected !!