14 ವರ್ಷಗಳಲ್ಲಿ 6 ನಿಗೂಢ ಹತ್ಯೆಗಳ ಕಿಲ್ಲರ್ಸ್ ಅರೆಸ್ಟ್!

501

ತಿರುವನಂತಪುರಂ: ಒಂದೇ ಕುಟುಂಬದ ಆರು ಜನರನ್ನ ಹಂತ ಹಂತವಾಗಿ ನಿಗೂಢವಾಗಿ ಹತ್ಯೆ ಮಾಡಿದ ಆರೋಪಿಯನ್ನ ಬಂಧಿಸಲಾಗಿದೆ. 47 ವರ್ಷದ ಜಾಲಿ ಥಾಮಸ್ ಈಕೆಗೆ ಸಾಥ್ ನೀಡಿದ ಮ್ಯಾಥ್ಯೂ ಹಾಗೂ ಪ್ರಜುಕುಮಾರ ಎಂಬುವವರನ್ನ ಅರೆಸ್ಟ್ ಮಾಡಲಾಗಿದೆ.

ನಿಗೂಢವಾಗಿ ಹತ್ಯೆಯಾದವರ ಲಿಸ್ಟ್ ಹಾಗೂ ಹಂತಕಿ

2002ರಿಂದ 2016ರ ನಡುವಿನಲ್ಲಿ ಸರಣಿ ನಿಗೂಢ ಸಾವುಗಳು ನಡೆದ್ವು. ಜಾಲಿಯ ಅತ್ತೆ ಅನಮ್ಮಾ ಥಾಮಸ್ ಮೊದಲ ಬಲಿ. 2008ರಲ್ಲಿ ಮಾವ ಟಾಮ್ ಥಾಮಸ್, 2011ರಲ್ಲಿ ಜಾಲಿ ಮಾಜಿ ಪತಿ ರಾಯ್ ಥಾಮಸ್, ರಾಯ್ ಚಿಕ್ಕಪ್ಪ 2014ರಲ್ಲಿ, 2016ರಲ್ಲಿ ಮತ್ತೊಬ್ಬಳು ಮಹಿಳೆ ಹಾಗೂ ಆಕೆಯ ಒಂದು ವರ್ಷದ ಮಗು ಸಹ ಅನುಮಾನಸ್ಪದವಾಗಿ ಸಾವನ್ನಪ್ಪಿದ್ರು.

ಮರಣೋತ್ತರ ಪರೀಕ್ಷೆಗೆ ಶವಗಳನ್ನ ಹೊರತೆಗೆಯುತ್ತಿರುವುದು

ಈ ಎಲ್ಲ ಆರು ಸಾವಿಗೆ ವಿಷಪೂರಿತ ಆಹಾರ ಸೇವನೆ ಕಾರಣ ಅನ್ನೋದು ಹಾಗೂ ಪ್ರತಿ ಸಾವಿನಲ್ಲಿ ಸಾಮ್ಯತೆ ಇರುವುದು. ಪೊಟಾಶಿಯಂ ಸೈನೈಡ್ ಬಳಸಿ ಹತ್ಯೆ ಮಾಡಲಾಗಿದೆ ಎನ್ನಲಾಗ್ತಿದೆ. 2016ರಲ್ಲಿ ನಡೆದ ಕೊಲೆಗೆ ಸಂಬಂಧಿಸಿದಂತೆ ಬಂಧಿಸಿದ್ದು, ಉಳಿದ ಸಾವಿನ ತನಿಖೆ ನಡೆಯುತ್ತಿದೆ. ಹೀಗಾಗಿ ಮರಣೋತ್ತರ ಪರೀಕ್ಷೆ ನಡೆಸಲಾಗ್ತಿದೆ. ಜಾಲಿಯ ವಿವಾಹೇತರ ಸಂಬಂಧ ಹಾಗೂ ಆಸ್ತಿಗಾಗಿ ಕೊಲೆ ನಡೆದಿರುಬಹುದು ಎನ್ನಲಾಗ್ತಿದೆ.




Leave a Reply

Your email address will not be published. Required fields are marked *

error: Content is protected !!