ದೇಶವನ್ನು ದಿವಾಳಿ ಮಾಡಿದ್ದು ಮೋದಿ, ನಾವಲ್ಲ: ಸಿಎಂ ಸಿದ್ದರಾಮಯ್ಯ

168

ಪ್ರಜಾಸ್ತ್ರ ಸುದ್ದಿ

ಕಲಬುರಗಿ: ಇದೊಂದು ಐತಿಹಾಸಿಕ ದಿನ. ಇಂದು ಜ್ಯೋತಿಯನ್ನು ಬೆಳಗುವುದರ ಮೂಲಕ ಗೃಹಜ್ಯೋತಿ ಕಾರ್ಯಕ್ರಮಕ್ಕೆ ಖರ್ಗೆ ಅವರ ಸಮ್ಮುಖದಲ್ಲಿ ಚಾಲನೆ ಕೊಟ್ಟಿದ್ದೇವೆ. ಚುನಾವಣೆಪೂರ್ವದಲ್ಲಿ ನಾವು ಐದು ಗ್ಯಾರೆಂಟಿಗಳನ್ನು ರಾಜ್ಯದ ಜನರಿಗೆ ವಾಗ್ದಾನದ ಮೂಲಕ ಕೊಟ್ಟಿದ್ದೇವು. ಆ ಗ್ಯಾರೆಂಟಿಗಳಿಗೆ ನಾನು, ಡಿ.ಕೆ ಶಿವಕುಮಾರ್ ರುಜು ಮಾಡಿ ಗ್ಯಾರೆಂಟಿ ಕಾರ್ಡ್ ಗಳನ್ನು ಎಲ್ಲ ಕಡೆ ಹಂಚುವ ಕೆಲಸ ಮಾಡಲಾಯಿತು. ಹಿಂದೆ ಸಹ ನುಡಿದಂತೆ ನಡೆದಿದ್ದೇವೆ. ಈಗಲೂ ಸಹ ನುಡಿದಂತೆ ನಡೆದಿದ್ದೇವೆ ಅಂತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಶನಿವಾರ ಗೃಹಜ್ಯೋತಿ ಯೋಜನೆ ಚಾಲನೆ ನೀಡಿ ಮಾತನಾಡಿದರು. ಬರೀ ಐದು ಗ್ಯಾರೆಂಟಿಗಳನ್ನು ಬಜೆಟ್ ಮೂಲಕ ಜಾರಿಗೆ ಮಾಡುತ್ತೇವೆ ಅಂತಾ ಹೇಳಿಲ್ಲ. ಅದರ ಜೊತೆಗೆ 76 ಯೋಜನೆಗಳನ್ನು ಜಾರಿಗೆ ತರುವಂತಹ ಕೆಲಸವನ್ನು ಮಾಡಿದ್ದೇವೆ. ಮುಂದಿನ 5 ವರ್ಷಗಳಲ್ಲಿ ಎಲ್ಲ ಭರವಸೆಗಳನ್ನು ಈಡೇರಿಸತ್ತೇವೆ ಎಂದು ನಿಮಗೆ ಸ್ಪಷ್ಟನೆ ನೀಡುತ್ತೇನೆ. ಯಾರೂ ಸಂಶಯ ಇಟ್ಟುಕೊಳ್ಳಬೇಡಿ. ಯಾಕಂದರೆ ವಿರೋಧ ಪಕ್ಷದವರು ಗುಲ್ಲೆಬ್ಬಿಸುತ್ತಿದ್ದಾರೆ. ಪ್ರಧಾನಿ ಮೋದಿ ಅವರು ಸಹ ಈ 5 ಗ್ಯಾರೆಂಟಿಗಳನ್ನು ಕೊಟ್ಟರೆ ದಿವಾಳಿ ಆಗುತ್ತೆ ಅಂತಾರೆ. ನರೇಂದ್ರ ಮೋದಿಜೀ 5 ಗ್ಯಾರೆಂಟಿಗಳನ್ನು ಜಾರಿಗೆ ಕೊಡುತ್ತೇವೆ. ಹಣವನ್ನು ಒದಗಿಸಿದ್ದೇವೆ. ಕರ್ನಾಟಕ ರಾಜ್ಯ ದಿವಾಳಿ ಆಗಲಿಲ್ಲ. ಕರ್ನಾಟಕವನ್ನು, ದೇಶವನ್ನು ದಿವಾಳಿ ಮಾಡಿದ್ದು ನರೇಂದ್ರ ಮೋದಿ ಅಂತಾ ಕಿಡಿ ಕಾರಿದರು.

ಹಿಂದೆ ಕರ್ನಾಟಕ ಸುಭದ್ರವಾಗಿತ್ತು. ನಿಮ್ಮ ಪಕ್ಷ ಅಧಿಕಾರದಲ್ಲಿ ಇದ್ದಾಗ ಸಂಪತ್ತನ್ನು ಲೂಟಿ ಮಾಡಿ ದುರಾಡಳಿತವನ್ನು ನೀಡಿ, ಬಡವರಿಗೆ, ದಲಿತರಿಗೆ, ಹಿಂದೂಳಿದವರಿಗೆ, ಅಲ್ಪಸಂಖ್ಯಾತರಿಗೆ, ರೈತರಿಗೆ ಅನ್ಯಾಯ ಮಾಡಿದ್ದು ಬಿಜೆಪಿ ಸರ್ಕಾರ. ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದ್ದು ಮಾತ್ರ ಈ ಭಾಗಕ್ಕೆ ಅವರ ಕೊಡುಗೆ ಅಂತಾ ವಾಗ್ದಾಳಿ ನಡೆಸಿದರು.

ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಪಕ್ಷ ಸರ್ಕಾರ ಯಾವಾಗ ಯಾವಾಗ ಬರುತ್ತೋ ಹೊಸ ಹೊಸ ಕಾರ್ಯಕ್ರಮಗಳನ್ನು ಯೋಜನೆಗಳನ್ನು ರೈತರು, ಬಡವರು, ಹೆಣ್ಮಕ್ಕಳು, ಯುವಕರಿಗಾಗಿ ತೆಗೆದುಕೊಂಡು ಬರುತ್ತೆ. ಈ ಹಿಂದೆ ನಮ್ಮ ಸರ್ಕಾರ ಇದ್ದಾಗಲೂ ಅನೇಕ ಕಾರ್ಯಕ್ರಮಗಳನ್ನು ಬಡವರಿಗೆ ಕೊಟ್ಟಿದ್ದೇವೆ. ನಮ್ಮ ದುರ್ದೈವ ಒಳ್ಳೆಯ ಕಾರ್ಯಕ್ರಮ ಕೊಟ್ಟರೂ ಜನರು ಯಾಕೆ ಮುನಿಸಿಕೊಂಡರು ಗೊತ್ತಿಲ್ಲ ಎಂದರು. ಬಿಜೆಪಿ ಸರ್ಕಾರ ಇತ್ತು ಬಡವರಿಗೆ ಒಂದು ಯೋಜನೆ ಕೊಡಲಿಲ್ಲ. ಈಗ ನಮ್ಮ ಸರ್ಕಾರವಿದೆ. 5 ಗ್ಯಾರೆಂಟಿಗಳ ಬಗ್ಗೆ ಇಡೀ ದೇಶದಲ್ಲಿ ಮಾತನಾಡುತ್ತಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಹಿಮಾಚಲ ಮುಖ್ಯಮಂತ್ರಿ ಅವರು ಸಹ ಗ್ಯಾರೆಂಟಿ ಬಗ್ಗೆ ಕೇಳಿದರು. ನಾನು ಹೇಳಿದ ಯಾರು ಬಡವರ ಬಗ್ಗೆ ಚಿಂತಿಸುತ್ತಾರೋ ಅವರು ಕಾರ್ಯಕ್ರಮದ ಜೊತೆಗೆ ದುಡ್ಡು ಹುಡುಕುತ್ತಾರೆ. ಆ ಕೆಲಸವನ್ನು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಜಾರ್ಜ್ ಅವರ ಮಾಡುತ್ತಿದ್ದಾರೆ ಅಂತಾ ಶ್ಲಾಘಿಸಿದರು. ನುಡಿದಂತೆ ನಡೆಯುವುದು ಕಾಂಗ್ರೆಸ್ ಸರ್ಕಾರ. ಹಿಂದೆ ಮೋದಿಯವರು ನುಡಿದರು. ವರ್ಷಕ್ಕೆ ಯುವಕರಿಗೆ 2 ಕೋಟಿ ನೌಕರಿ ಕೊಡ್ತೀನಿ ಅಂದ್ರು ಕೊಟ್ಟಿಲ್ಲ. 15 ಲಕ್ಷ ರೂಪಾಯಿ ಪ್ರತಿ ಕುಟುಂಬಕ್ಕೆ ಕೊಡ್ತೀನಿ ಎಂದಿದ್ದರು. ಸಿಗಲಿಲ್ಲ. ಒಬ್ಬ ದೇಶದ ಪ್ರಧಾನಿ ವಚನ ಭ್ರಷ್ಟರಾಗಲು ಸಾಧ್ಯನಾ, ನೀವು ತಗೊಂಡು ಸುಳ್ಳು ಹೇಳ್ತಿರಬಹುದು ಅಂತಾ ಕಾಲೆಳೆದರು.

ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ ಶಿವಕುಮಾರ್ ಮಾತನಾಡಿ, ಖರ್ಗೆ ಅವರು 371ಜೆ ತಂದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಜ್ಯೋತಿಯನ್ನು ಬೆಳಗಿಸಿದರು. ಇವತ್ತು ಕಾಂಗ್ರೆಸ್ ಪಕ್ಷ ನಾನು, ಸಿದ್ದರಾಮಯ್ಯನವರು ಸೇರಿ ರಾಜ್ಯದ ಜನತೆಯ ಸಮಸ್ಯೆಯನ್ನು ತಿಳಿದುಕೊಳ್ಳಬೇಕೆಂದು ಪ್ರವಾಸ ಹಮ್ಮಿಕೊಂಡೆವು. ಮಹಾತ್ಮ ಗಾಂಧಿ ಅವರು ನಾಯಕತ್ವ ವಹಿಸಿಕೊಂಡ ಬೆಳಗಾವಿ ಜಾಗಕ್ಕೆ ಹೋಗಿ, ಅಲ್ಲಿ ಗಾಂಧಿ ಭಾವಿ ಇದೆ. ಅಲ್ಲಿಂದ ನೀರನ್ನು ತೆಗೆದು ಅಲ್ಲಿನ ರಸ್ತೆಗಳಲ್ಲಿ ನೀರನ್ನು ಚೆಲ್ಲಿ, ಕಸಗೂಡಿಸಿ ಬಡತನ, ಬೆಲೆ ಏರಿಕೆ, ದಾರಿದ್ರ್ಯವನ್ನು ಹೋಗಲಾಡಿಸಲು ಪ್ರಜಾಧ್ವನಿ ಯಾತ್ರೆ ನಡೆಸಿದವು. ಖರ್ಗೆ ಅವರ ನೇತೃತ್ವದಲ್ಲಿ, ಸಿದ್ದರಾಮಯ್ಯನವರ ನಾಯಕತ್ವದಲ್ಲಿ, ನನ್ನ ಅಧ್ಯಕ್ಷತೆಯಲ್ಲಿ ಒಂದು ಘೋಷಣೆ ಮಾಡಿ ಮಾಡಿದೇವು. ಕಾಂಗ್ರೆಸ್ ಪಕ್ಷದ ಮೊದಲ ಗ್ಯಾರೆಂಟಿ. ನಿಮ್ಮ ಮನೆಗೆ ಜ್ಯೋತಿಯನ್ನು ಕೊಡುವ ಗ್ಯಾರೆಂಟಿ ಅಂತಾ ಹೇಳಿದರು.

ಈ ವೇಳೆ ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣ ಪ್ರಕಾಶ್ ಪಾಟೀಲ, ಕೆ.ಜೆ ಜಾರ್ಜ್, ಶಾಸಕಿ ಖನೀಜಾ ಫಾತಿಮಾ, ಪರಿಷತ್ ಸದಸ್ಯ ತಿಪ್ಪಣ್ಣ ಕಮಕನೂರ ಸೇರಿ ಅನೇಕರು ಉಪಸ್ಥಿತರಿದ್ದರು.




Leave a Reply

Your email address will not be published. Required fields are marked *

error: Content is protected !!