ಫೈಸ್ಟ್ ನೈಟ್ ನಲ್ಲಿ ಏನ್ ಮಾಡ್ತೀರಾ ಎಂದು ರಚ್ಚು ಪತ್ರಕರ್ತರನ್ನು ಪ್ರಶ್ನಿಸಿದ್ಯಾಕೆ?

285

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಬೆಂಗಳೂರು: ಪತ್ರಕರ್ತರು ಕೇಳಿದ ಪ್ರಶ್ನೆಗೆ ಸ್ಯಾಂಡಲ್ ವುಡ್ ಡಿಂಪಲ್ ಕ್ವಿನ್ ರಚಿತಾ ರಾಮ್ ವಾಪಸ್ ಕೇಳಿದ ಪ್ರಶ್ನೆಯಿಂದ ಕೆಲ ಕಾಲ ಎಲ್ಲರೂ ತಬ್ಬಿಬ್ಬು ಆಗಿದ್ದಾರೆ. ಅದೇನು ಅಂದರೆ ನಟ ಅಜಯ್ ರಾವ್ ಹಾಗೂ ನಟಿ ರಚಿತಾ ರಾಮ್ ಜೋಡಿಯ ಲವ್ ಯೂ ರಚ್ಚು ಅನ್ನೋ ಚಿತ್ರ ರೆಡಿಯಾಗುತ್ತಿದೆ.

ಈ ಚಿತ್ರದ ಮುದ್ದು ನೀನು ಅನ್ನೋ ಹಾಡು ಬಿಡುಗಡೆಯಾಗಿದೆ. ಇದರಲ್ಲಿ ಫೈಸ್ಟ್ ನೈಟ್ ದೃಶ್ಯದಲ್ಲಿ ನಟಿ ರಚಿತಾ ರಾಮ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಉಪೇಂದ್ರ ನಟನೆಯ ಐ ಲವ್ ಯೂ ಚಿತ್ರದಲ್ಲಿ ಇದೆ ರೀತಿ ಬೋಲ್ಡ್ ಆಗಿ ಕಾಣಿಸಿಕೊಂಡಾಗ ಒಂದಿಷ್ಟು ವಿವಾದವಾಗಿತ್ತು. ಆಗ ಕಣ್ಣೀರು ಹಾಕಿ ಇನ್ಮುಂದೆ ಈ ರೀತಿಯಾಗಿ ಮಾಡಲ್ಲ ಅಂದಿದ್ದರು. ಇದೆ ವಿಚಾರವಾಗಿ ಪತ್ರಕರ್ತರೊಬ್ಬರು ಪ್ರಶ್ನೆ ಕೇಳಿದ್ದಾರೆ.

ಇದಕ್ಕೆ ಉತ್ತರಿಸುತ್ತಾ, ನಾನು ಮಾಡಲ್ಲಂತ ಹೇಳಿದ್ದೆ. ಮಾಡಿದ್ದೇನೆ ಅಂದರೆ ಅದರಲ್ಲಿ ಏನೂ ವಿಷಯ ಇರುತ್ತೆ ಅಂತಾ ಹೇಳಿದ ನಟಿ, ಮದುವೆ ಆದಮೇಲೆ ಫಸ್ಟ್ ನೈಟ್ ನಲ್ಲಿ ಏನ್ ಮಾಡ್ತೀರಾ. ಇಲ್ಲಿ ತುಂಬಾ ಜನ ಮದುವೆಯಾಗಿದ್ದೀರಿ. ಆ ಐಮ್ ಸ್ವಾರಿ ಟು ಆಸ್ಕ್ ದಿಸ್ ಕೊಷನ್ ಅಂತಾ ಹೇಳಿದ್ದಾರೆ. ನಟಿ ರಚಿತಾ ರಾಮ್ ಹೀಗೆ ಕೇಳಿದ್ದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಜನ ಹಲವು ರೀತಿಯಲ್ಲಿ ಮಾತನಾಡುತ್ತಿದ್ದಾರೆ.




Leave a Reply

Your email address will not be published. Required fields are marked *

error: Content is protected !!