ಯುನೈಟೆಡ್ ಕ್ಲಬ್ ನಿಂದ ಕ್ರಿಸ್ಟಿಯಾನೋ ರೊನಾಲ್ಡೊ ಔಟ್!

159

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಪುಟ್ಬಾಲ್ ಜಗತ್ತಿನ ಸ್ಟಾರ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೊ ಅವರನ್ನು ಯುನೈಟೆಡ್ ಕ್ಲಬ್ ನಿಂದ ಹೊರಗೆ ಹಾಕಲು ಸಜ್ಜಾಗಿದೆಯಂತೆ. ಒಪ್ಪಂದದ ಉಲ್ಲಂಘನೆ ಆರೋಪದ ಮೇಲೆ ವಜಾ ಮಾಡಲು ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್ ಸಿದ್ಧತೆ ನಡೆಸಿದೆ ಎಂದು ವರದಿಯಾಗಿದೆ.

ಯುನೈಟೆಡ್ ತನಗೆ ಅರ್ಹವಾದ ಗೌರವ ನೀಡುತ್ತಿಲ್ಲ ಎಂದು ಆರೋಪಿಸಿದ ಬಳಿಕ ಕ್ರಿಸ್ಟಿಯಾನೋ ಎಲ್ಲೆಡೆ ಮತ್ತಷ್ಟು ಗಮನ ಸೆಳೆದಿದ್ದರು. ಕ್ಲಬ್ ನಲ್ಲಿ ನಡೆದ ಎಲ್ಲ ತಪ್ಪುಗಳಿಗೆ ತಮ್ಮನ್ನು ಗುರಿ ಮಾಡಲಾಗಿದೆ ಎಂದಿದ್ದರು. ಈಗ ಕ್ಲಬ್ ಆಟಗಾರನನ್ನೇ ಹೊರಗೆ ಹಾಕಲು ಸಿದ್ಧತೆ ನಡೆಸಿದ್ದು, ಉಳಿದ 16 ಮಿಲಿಯನ್ ಪೌಂಡ್ ಪಾವತಿಸುವುದಿಲ್ಲ ಎಂದಿದೆಯಂತೆ.




Leave a Reply

Your email address will not be published. Required fields are marked *

error: Content is protected !!