ನೀರು ಕುಡಿಯಿರಿ ಎಂದ ಆಟಗಾರ: ಕೋಲಾ ಕಂಪನಿಗೆ 30 ಸಾವಿರ ಕೋಟಿ ನಷ್ಟ!

338

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಹಂಗೇರಿ: ದೊಡ್ಡ ದೊಡ್ಡ ಬ್ರ್ಯಾಂಡ್ ಕಂಪನಿಗಳು ತಮ್ಮ ಪ್ರಾಡೆಕ್ಟ್ ಮಾರಾಟ ಮಾಡಲು, ಸಿನಿಮಾ, ಕ್ರೀಡಾ ತಾರೆಯರು ಸೇರಿದಂತೆ ಇತರೆ ಸೆಲೆಬ್ರಿಟಿಗಳನ್ನ ಪ್ರಚಾರಕ್ಕೆ ಬಳಿಸಿಕೊಳ್ಳುತ್ತಾರೆ. ಇದ್ರಿಂದಾಗಿ ಅವರ ಕಂಪನಿಗೆ ಕೋಟ್ಯಾಂತರ ರೂಪಾಯಿ ಲಾಭವಾಗುತ್ತೆ. ಇದೀಗ ಸ್ಟಾರ್ ಪುಟ್ಬಾಲ್ ಆಟಗಾರನ ಒಂದೇ ಒಂದು ಮಾತಿಗೆ ಕೋಕಾಕೋಲಾ ಕಂಪನಿಗೆ ಬರೋಬ್ಬರಿ 30 ಸಾವಿರ ಕೋಟಿ ನಷ್ಟವಾಗಿದೆಯಂತೆ.

ಪೋರ್ಚುಗಲ್ ಹಾಗೂ ಹಂಗೇರಿ ನಡುವೆ ಯುರೋ ಕಪ್ ಪುಟ್ಬಾಲ್ ಪಂದ್ಯ ಹಂಗೇರಿಯಲ್ಲಿ ನಡೆಯುತ್ತಿದೆ. ಆದ್ರೆ, ಪಂದ್ಯಕ್ಕೂ ಮೊದ್ಲು ವರ್ಲ್ಡ್ ಫೇಮಸ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಪತ್ರಿಕಾಗೋಷ್ಠಿ ನಡೆಸಿ ಮಾತ್ನಾಡಿದ್ರು. ಈ ವೇಳೆ ಕೋಕಾಕೋಲಾ ಕಂಪನಿಯ ಎರಡು ಬಾಟಲ್ ಗಳು ಹಾಗೂ ನೀರಿನ ಒಂದು ಬಾಟಲ್ ಇಡಲಾಗಿತ್ತು. ಕೋಕಾಕೋಲಾ ಕಂಪನಿಯ ಬಾಟಲ್ ಗಳನ್ನ ಪಕಕ್ಕೆ ಸರಿಸಿಟ್ಟು ನೀರು ಕುಡಿಯಿರಿ ಎಂದಿದ್ದಾರೆ.

ಹಾವ್ ಎ ವಾಟರ್ ಎಂದು ಎರಡು ಮಾತಿಗೆ ಶೇರು ಮಾರುಕಟ್ಟೆಯಲ್ಲಿ ಕೋಕಾಕೋಲಾ ಕಂಪನಿಗೆ 4 ಬಿಲಿಯನ್ ಡಾಲರ್(30 ಸಾವಿರ ಕೋಟಿ) ನಷ್ಟವಾಗಿದೆಯಂತೆ. ಯುರೋ ಕಪ್ ಟೂರ್ನಿಯ ಪ್ರಾಯೋಜಕತ್ವರಲ್ಲಿ ಕೋಕಾಕೋಲಾ ಕಂಪನಿಯೂ ಒಂದಾಗಿದೆ. ಹೀಗಾಗಿ ಬಾಟಲ್ ಗಳನ್ನ ಅಲ್ಲಿ ಇಡಲಾಗಿತ್ತು. ಈಗ ಆಟಗಾರ ವಿರುದ್ಧ ಸಂಘಟಿಕರು ಶಿಸ್ತುಕ್ರಮಕ್ಕೆ ಮುಂದಾಗಿದ್ದಾರಂತೆ. ರೊನಾಲ್ಡೊಗೆ ವಿಶ್ವದಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದು, ಅವರ ಒಂದು ಮಾತು ಕೋಲಾಹಲ ಎಬ್ಬಿಸಿದೆ.




Leave a Reply

Your email address will not be published. Required fields are marked *

error: Content is protected !!