ಕೋವಿಡ್ 19 ಎಫೆಕ್ಟ್: ಪ್ರತ್ಯೇಕ ರೂಮಿನಲ್ಲಿ ಪುಟ್ಬಾಲ್ ಸ್ಟಾರ್ ರೊನಾಲ್ಡೋ

349

ಇದೀಗ ಎಲ್ಲೆಡೆ ಕೋವಿಡ್ 19 ಅಬ್ಬರ ಜೋರಾಗಿದೆ. ಹಂತ ಹಂತವಾಗಿ ಎಲ್ಲೆಡೆ ಹಬ್ಬಿದ ಪರಿಣಾಮ ಸಾವು ನೋವಿನ ಸಂಖ್ಯೆಯೂ ಏರುತ್ತಿದೆ. ಅದೇ ರೀತಿ ಸ್ಪೇನ್ ದೇಶದಲ್ಲಿಯೂ ಕರೋನಾ ಭೀತ ಜೋರಾಗಿದೆ. ಇದರ ಜೊತೆಗೆ ಸ್ಪೇನ್ ನಾಡಿನ ಸ್ಟಾರ್ ಪುಟ್ಬಾಲ್ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡೋ ಅವರನ್ನ ಸಹ ಪ್ರತ್ಯೇಕವಾಗಿ ಇಡಲಾಗಿದೆ.

ಸಹ ಆಟಗಾರ ಡೇನೀಲ್ ರುಗಾನಿಗೆ ಕರೋನಾ ಸೋಂಕು ದೃಢಪಟ್ಟಿದೆ. ಹೀಗಾಗಿ ಪೋರ್ಚಗಲ್ ನ ಮಡೇರಾದಲ್ಲಿ ರೊನಾಲ್ಡೋ ಅವರನ್ನ ರೂಮಿನಲ್ಲಿ ಪ್ರತೇಕವಾಗಿ ಇರಿಸಲಾಗಿದೆ. ಈ ಮೂಲಕ ವರ್ಲ್ಡ್ ಸ್ಟಾರ್ ಪ್ಲೇಯರ್ ಗೂ ಕರೋನಾ ಭೀತ ಆವರಿಸಿಕೊಂಡಿದೆ.

ಇದರ ನಡುವೆ ರೊನಾಲ್ಡೋ ಅವರ ಒಡೆತನ ಹೋಟೆಲ್ ಗಳು ಆಸ್ಪತ್ರೆಗಳಾಗಿ ಬದಲಾಗಿದ್ದು, ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಗ್ತಿದೆ ಎಂದು ವರದಿಯಾಗಿತ್ತು. ಆದ್ರೆ, ಇದೆಲ್ಲ ಸುಳ್ಳು. ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ಸಿಬ್ಬಂದಿಯ ವೇತನ ನೀಡಲಿದ್ದಾರೆ ಎಂದು ಹೋಟೆಲ್ ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.




Leave a Reply

Your email address will not be published. Required fields are marked *

error: Content is protected !!