ಮಗು ಕಳೆದುಕೊಂಡ ಪುಟ್ಬಾಲ್ ದಿಗ್ಗಜ ರೊನಾಲ್ಡ್

193

ಪ್ರಜಾಸ್ತ್ರ ಕ್ರೀಡಾ ಸುದ್ದಿ

ಮ್ಯಾಂಚೆಸ್ಟರ್: ಪುಟ್ಬಾಲ್ ಲೋಕದ ದಿಗ್ಗಜ ಆಟಗಾರ ಕ್ರಿಸ್ಟಿಯಾನೋ ರೊನಾಲ್ಡ್ ಅವರ ತಮ್ಮ ಅವಳಿ ಮಕ್ಕಳಲ್ಲಿ ನವಜಾತ ಗಂಡು ಮಗುವೊಂದನ್ನು ಕಳೆದುಕೊಂಡಿದ್ದಾರೆ. ಈ ಬಗ್ಗೆ ಅವರೆ ಮಾಹಿತಿ ನೀಡಿದ್ದಾರೆ.

ನಮ್ಮ ಗಂಡು ಮಗು ಮೃತಪಟ್ಟಿದೆ ಎಂದು ಘೋಷಿಸಬೇಕಿದೆ. ಇದು ಯಾವುದೇ ಪೋಷಕರಾದರು ಅನುಭವಿಸಬಹುದಾದ ದೊಡ್ಡ ನೋವು. ನಮಗೆ ಸ್ವಲ್ಪ ಬದುಕುವ ಶಕ್ತಿಯನ್ನು ನೀಡಿದ್ದು ಹೆಣ್ಣು ಮಗು. ಆಕೆ ನಮಗೆ ಭರವಸೆ, ಶಕ್ತಿ ನೀಡಿದ್ದಾಳೆ. ವೈದ್ಯರು, ನರ್ಸ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ.

ರೊನಾಲ್ಡ್ ಪತ್ನಿ ಜಾರ್ಜಿನಾ ರೋಡ್ರಿಗಸ್ ಒಂದು ಗಂಡು, ಒಂದು ಹೆಣ್ಣು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದರು. ಅದರಲ್ಲಿ ಗಂಡು ಮಗು ಮೃತಪಟ್ಟಿದೆ. ನಿಮ್ಮ ದುಃಖದಲ್ಲಿ ನಾವೆಲ್ಲ ಜೊತೆಗಿದ್ದೇವೆ ಎಂದು ಅಭಿಮಾನಿಗಳು ಸೇರಿದಂತೆ ಅನೇಕರು ಹೇಳಿದ್ದಾರೆ.




Leave a Reply

Your email address will not be published. Required fields are marked *

error: Content is protected !!