ಕಡಲ ಒಡಲು ಸೇರಿದ 1.48 ಕೋಟಿ ಆಮೆಗಳು

312

ಪ್ರಜಾಸ್ತ್ರ ಸುದ್ದಿ

ಓಡಿಶಾ: ಇಲ್ಲಿನ ಗಹಿರ್ ಮಾತಾ ಕಡಲ ದಂಡೆಯಲ್ಲಿ ಬರೋಬ್ಬರಿ 1.48 ಕೋಟೆ ಆಮೆಗಳು ಮೊಟ್ಟೆಯೊಡೆದುಕೊಂಡು ಹೊರ ಬಂದಿವೆ. ಆಲಿವ್ ರಿಡ್ಲೆ ತಳಿಯ ಆಮೆಗಳು ಮೊಟ್ಟೆಯೊಡೆದು ಹೊರ ಬಂದಿದ್ದು, ಸಮುದ್ರವನ್ನ ಸೇರಿಕೊಳ್ಳುತ್ತಿವೆ.

ಸಮುದ್ರದ ನಿರ್ಜನ ದಂಡೆಯಲ್ಲಿ ವಾರ್ಷಿಕ ಕ್ರಿಯೆಯೊಂದು ದೊಡ್ಡ ಸಂಖ್ಯೆಯಲ್ಲಿ ನೆರವೇರಿದೆ ಎಂದು ಭಿಟರ್ ಕಾಣಿಕಾ ಅಳಿವೆ ಅರಣ್ಯ ವಿಭಾಗದ ಅಧಿಕಾರಿ ಬಿಕಾಶ್ ರಂಜನ ದಾಶ್ ಹೇಳಿದ್ದಾರೆ. ಇನ್ನು ಇವುಗಳ ಸುರಕ್ಷತೆಗಾಗಿ 24 ಗಂಟೆಗಳ ಕಾಲ ಕಟ್ಟೆಚ್ಚರ ವಹಿಸಲಾಗಿದೆ.

ಐಎಫ್ಎಸ್ ಅಧಿಕಾರಿ ಸುಶಾಂತ ನಂದಾ ಎಂಬುವರು ಮಿಲಿಯನ್ ಮಿಲಿಯನ್ ಆಮೆಗಳು ಸಮುದ್ರದ ದಂಡೆಯಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನ ಇಟ್ಟು ಹೋಗ್ತಿರುವ ದೃಶ್ಯವನ್ನ ಟ್ವೀಟರ್ ನಲ್ಲಿ ಹಂಚಿಕೊಂಡಿದ್ದಾರೆ.




Leave a Reply

Your email address will not be published. Required fields are marked *

error: Content is protected !!