ಬ್ರೇಕಿಂಗ್ ನ್ಯೂಸ್
Search

ಸೋಷಿಲ್ ಮೀಡಿಯಾಗೆ ಪಿಎಂ ಗುಡ್ ಬೈ ಹೇಳುವ ಗುಟ್ಟೇನು?

322

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಈ ಭಾನುವಾರದಿಂದ ಸೋಷಿಯಲ್ ಮೀಡಿಯಾದಿಂದ ನಾನು ಹಿಂದೆ ಸರಿಯಬೇಕು ಅನ್ನೋ ಆಲೋಚನೆ ಮಾಡಿದ್ದೇನೆ ಅಂತಾ ಹೇಳಿ ಸೋಮವಾರ ಟ್ವೀಟ್ ಮಾಡಿದ್ದಾರೆ. ಇದಕ್ಕೆ ಭರ್ಜರಿಯಾಗಿ ಪರ ವಿರೋಧದ ಅಲೆಗಳು ಅದೇ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.

ಕಾಂಗ್ರೆಸ್ ಯುವ ನಾಯಕ, ಸಂಸದ ರಾಹುಲ ಗಾಂಧಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ದ್ವೇಷ ಬಿಡಿ ಸಾಮಾಜಿಕ ಜಾಲತಾಣಗಳನ್ನಲ್ಲ ಎಂದು ಟ್ವೀಟ್ ಮಾಡಿದ್ದಾರೆ. ಇನ್ನು ಶಶಿ ತರೂರ್, ಪ್ರಧಾನಿಯ ಹಠಾತ್ ನಡೆ ದೇಶದಾದ್ಯಂತ ಸೋಷಿಯಲ್ ಮೀಡಿಯಾ ನಿಷೇಧ ಮಾಡುವುದಕ್ಕೆ ಮುನ್ನುಡಿಯೇ ಎಂದು ಪ್ರಶ್ನಿಸಿದ್ದಾರೆ.

ನಿಮ್ಮು ಹೆಸರನ್ನು ಮುಂದಿಟ್ಟುಕೊಂಡು ಟ್ರೋಲ್ ಮಾಡುವ, ನಿಂದಿಸುವ, ಬೆದರಿಕೆಯೊಡ್ಡುವ ಟೀಂಗೆ ಈ ಸಲಹೆ ನೀಡಿಯೆಂದು ಕೇಳಿಕೊಳ್ಳುತ್ತೇನೆ ಎಂದು ರಣದೀಪ ಸಿಂಗ್ ಸುರ್ಜೆವಾಲ್ ಟ್ವೀಟ್ ಮಾಡಿದ್ದಾರೆ. ಇನ್ನು ಮೋದಿ ಪರವಾಗಿರುವ ಒಪ್ಪಿಕೊಂಡ್ರೆ, ವಿರೋಧಿಗಳು ಅವರ ನಡೆಯನ್ನ ಸಾಕಷ್ಟು ರೀತಿಯಲ್ಲಿ ಅಪಹಾಸ್ಯ ಮಾಡ್ತಿದ್ದಾರೆ. ಹೀಗಾಗಿ ಮೋದಿಯ ಒಂದು ಟ್ವಿಟ್ ಹಲವು ಪ್ರಶ್ನೆಗಳನ್ನ ಹುಟ್ಟು ಹಾಕಿದೆ. ಪಿಎಂ ಈ ನಡೆಯ ಹಿಂದೆ ದೇಶದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್ ಐಡಿಯಾ ಇದ್ಯಾ ಅನ್ನೋ ಪ್ರಶ್ನೆ ಮೂಡಿದೆ.

ಟ್ವೀಟರ್ ನಲ್ಲಿ 53.3 ದಶಲಕ್ಷ ಫಾಲೋವರ್ಸ್, ಫೇಸ್ ಬುಕನಲ್ಲಿ 44 ದಶಲಕ್ಷ ಫಾಲೋವರ್ಸ್ ಇದ್ದಾರೆ. ನಿನ್ನೆ ಸಂಜೆ ಮಾಡಿದ ಟ್ವೀಟ್ ಗೆ 1 ಲಕ್ಷ ಜನ ಪ್ರತಿಕ್ರಿಯೆ ನೀಡಿದ್ದಾರೆ. 50 ಸಾವಿರ ಜನ ರೀಟ್ವೀಟ್ ಮಾಡಿದ್ದಾರೆ. 1.5 ಲಕ್ಷ ಜನ ಇಷ್ಟಪಟ್ಟಿದ್ದಾರೆ.




Leave a Reply

Your email address will not be published. Required fields are marked *

error: Content is protected !!