ಮೈಸೂರು ದಸರಾ: ನಾಳೆ ಗಜಪಡೆ ಆಗಮನ

369

ಪ್ರಜಾಸ್ತ್ರ ಸುದ್ದಿ

ಮೈಸೂರು: ಕೋವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ದಸರಾ ಹಬ್ಬವನ್ನ ಅತಿ ಸರಳವಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ. ಹೀಗಾಗಿ ನಾಳೆ ಗಜಪಡೆಯನ್ನ ಔಪಚಾರಿಕವಾಗಿ ಸ್ವಾಗತಿಸಲಾಗ್ತಿದೆ. ಈ ಮೂಲಕ ಗುರುವಾರ ಗಜಪಡೆ ಮೈಸೂರು ಪ್ರವೇಶ ಮಾಡಲಿವೆ.

ಅರಣ್ಯ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ವೀರನಹೊಸಹಳ್ಳಿ ಹತ್ತಿರದ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ 5 ಆನೆಗಳು ಮೈಸೂರಿನತ್ತ ಸಾಗಲಿವೆ. ಈ ಬಾರಿ ಯಾವುದೇ ಸಾಂಸ್ಕೃತಿಕ ಚಟುವಟಿಕೆಗಳು ಇರುವುದಿಲ್ಲ. ಜನಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ. ಅರಣ್ಯ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು, ಮಾವುತರು ಮಾತ್ರ ಇರಲಿದ್ದಾರೆ.

ಅಕ್ಟೋಬರ್ 1ರಂದು ವಿಜಯ, ಅಭಿಮನ್ಯು, ವಿಕ್ರಂ, ಕಾವೇರಿ, ಗೋಪಿ ಆನೆಗಳು ಮೈಸೂರಿಗೆ ಬರಲಿವೆ. ಮೊದಲ ಬಾರಿಗೆ ಅಂಬಾರಿ ಹೊರುತ್ತಿರುವ ಅಭಿಮನ್ಯು 1970ರಲ್ಲಿ ಹೆಬ್ಬಳ್ಳ ಅರಣ್ಯದಿಂದ ತೆಗೆದುಕೊಂಡು ಬರಲಾಗಿದೆ. ಈ ಬಾರಿ ಅರಮನೆಯ ಆವರಣಕ್ಕೆ ಸಿಮೀತವಾಗಿ ದಸರಾ ನಡೆಯಲಿದೆ.




Leave a Reply

Your email address will not be published. Required fields are marked *

error: Content is protected !!