ಓಪನ್ ಹೈಮರ್ ಚಿತ್ರದಲ್ಲಿ ಭಗವದ್ಗೀತೆಗೆ ಅವಮಾನ!

291

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಅಣುಬಾಂಬ್ ಪಿತಾಮಹ ಓಪನ್ ಹೈಮರ್ ಬಯೋಪಿಕ್ ವರ್ಲ್ಡ್ ವೈಡ್ ರಿಲೀಸ್ ಆಗಿದೆ. ಕ್ರಿಸ್ಟೋಫರ್ ನಿಲೋನ್ ನಿರ್ದೇಶನದ ಚಿತ್ರ ಸಕ್ಸಸ್ ಫುಲ್ ಆಗಿ ಓಡುತ್ತಿದೆ. ಇದೀಗ ಭಾರತದಲ್ಲಿ ಈ ಚಿತ್ರ ವಿವಾದದ ಸ್ವರೂಪ ಪಡೆದುಕೊಂಡಿದೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಪ್ರಕಾರ, ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಪೂರ್ವದಲ್ಲಿ ಭಗವದ್ಗೀತೆ ಓದು ಎಂದು ಹೇಳಲಾಗಿದೆ ಎನ್ನಲಾಗುತ್ತಿದೆ. ಇನ್ನೊಂದು ಕಡೆ ಅಶ್ಲೀಲ ದೃಶ್ಯದಲ್ಲಿ ಮಹಿಳೆ ಭಗವದ್ಗೀತೆಯನ್ನು ಕೈಯಲ್ಲಿ ಹಿಡಿದುಕೊಂಡಿರುವುದು ಕಂಡು ಬಂದಿದ್ದು, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ ಎಂದು ಆಕ್ರೋಶ ವ್ಯಕ್ತವಾಗುತ್ತಿದೆ.

ಈ ಕುರಿತು ಸೇವ್ ಕಲ್ಚರ್ ಸೇವೆ ಇಂಡಿಯಾ ಫೌಂಡೇಶನ್ ಓಪನ್ ಹೈಮರ್ ಚಿತ್ರ ನಿರ್ಮಾಣ ಹಾಗೂ ತಯಾರಿಕರಿಗೆ ಬಹಿರಂಗ ಪತ್ರ ಬರೆದಿದ್ದು, ಈ ಚಿತ್ರ ಹಿಂದೂ ಧಾರ್ಮಿಕ ಭಾವನೆಗಳ ಮೇಲೆ ಕಟು ದಾಳಿ ಮಾಡಿದೆ. ಈ ಕುರಿತು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದಿದ್ದಾರೆ.




Leave a Reply

Your email address will not be published. Required fields are marked *

error: Content is protected !!