ವಿಶ್ವದಾದ್ಯಂತ ಓಪನ್ ಹೈಮರ್ ಹವಾ..

243

ಪ್ರಜಾಸ್ತ್ರ ಸಿನಿಮಾ ಡೆಸ್ಕ್

ಸಧ್ಯ ಚಿತ್ರ ಜಗತ್ತಿನಲ್ಲಿ ತೀವ್ರ ಚರ್ಚೆಯಲ್ಲಿರುವುದು ಹಾಲಿವುಡ್ ನ ಓಪನ್ ಹೈಮರ್ ಸಿನಿಮಾ. ಸ್ಟಾರ್ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನ ಒಂದಾದರೆ, ಅಣುಬಾಂಬು ಸೃಷ್ಟಿಕರ್ತನ ಜೀವನಗಾಥೆ ಅನ್ನೋದು ಮತ್ತೊಂದು ಕಾರಣಕ್ಕೆ ಸಿನಿಮಾ ಪ್ರಿಯರನ್ನು ಸೆಳೆಯುತ್ತಿದೆ.

ನಿರ್ದೇಶಕ ಕ್ರಿಸ್ಟೋಫರ್ ಚಿತ್ರದಲ್ಲಿ ನಟಿಸಬೇಕು ಎಂದು ಹಾಲಿವುಡ್ ಸ್ಟಾರ್ ನಟ, ನಟಿಯರೆ ಕಾಯುತ್ತಾರೆ. ಅಂತಹ ಚಿತ್ರಗಳನ್ನು ನೀಡಿದ ಶ್ರೇಷ್ಠ ನಿರ್ದೇಶಕ ಇವರು. ಜುಲೈ 21ರಲ್ಲಿ ರಿಲೀಸ್ ಆದ ಓಪನ್ ಹೈಮರ್, ಈ ಶತಮಾನದ ಶ್ರೇಷ್ಠ ಬಯೋಪಿಕ್ ಎನ್ನಲಾಗುತ್ತಿದೆ. ಜಪಾನಿನ ಹಿರೋಷಿಮಾ, ನಾಗಾಸಾಕಿ ಮೇಲೆ ಅಮೆರಿಕ ಎಸೆದ ಅಣುಬಾಂಬು ದುರಂತ ಇತಿಹಾಸದಲ್ಲಿ ದಾಖಲಾಗಿದೆ. ಇತಿಹಾಸ ಅಧ್ಯಯನ ಮಾಡುವ ಪ್ರತಿಯೊಬ್ಬರು ಈ ಯುದ್ಧವನ್ನು ತಿಳಿದುಕೊಂಡು ಹೋಗಲೇಬೇಕು.

ಜಾನ್ ರಾಬರ್ಟ್ ಓಪನ್ ಹೈಮರ್ ಮತ್ತು ನಿರ್ದೇಶಕ ಕ್ರಿಸ್ಟೋಫರ್ ನೋಲನ್

ನ್ಯೂಯಾರ್ಕ್ ಮೂಲದ ಜಾನ್ ರಾಬರ್ಟ್ ಓಪನ್ ಹೈಮರ್ ಬಹುದೊಡ್ಡ ವಿಜ್ಞಾನಿ ಬೆಳೆದ ರೀತಿ, ಅಣುಬಾಂಬು ತಯಾರಿಕೆ, ಎರಡನೇ ಮಹಾಯುದ್ಧದದಲ್ಲಿ ಅಮೆರಿಕ, ಜಪಾನಿನ ಮೇಲೆ ಎಸೆದು ಜಗತ್ತಿನ ಅತಿ ದೊಡ್ಡ ದುರಂತ ಸೃಷ್ಟಿಸಿದ ಬಗೆ, ಫ್ಯಾಶಿಸಂಗೆ ಪರ್ಯಾಯ ಕಮ್ಯುನಿಸಂ ಎಂದು ತಿಳಿದುಕೊಂಡಿದ್ದ ಹೈಮರ್, ಅಮೆರಿಕ ಪಾಲಿನ ಹೀರೋ ಆಗಿದ್ದವನು ವಿಲನ್ ಆಗಿ, ದೇಶದ್ರೋಹ ಶಿಕ್ಷೆಗೆ ಗುರಿಯಾಗಿದ್ದು ಸೇರಿ ಹಲವು ರೋಮಾಂಚನಕಾರಿ ಅಂಶಗಳಿಂದ ಕೂಡಿದ ಸಿನಿಮಾ ಭಾರತದಲ್ಲಿಯೂ ಕಮಾಲ್ ಮಾಡುತ್ತಿದೆ.

ಓಪನ್ ಹೈಮರ್ ಚಿತ್ರದಲ್ಲಿ ನಟಿಸಿದವರು.

62ನೇ ವಯಸ್ಸಿನಲ್ಲಿ ಗಂಟಲು ಕ್ಯಾನ್ಸರ್ ನಿಂದ ಮೃತಪಟ್ಟ ಭೂತಶಾಸ್ತ್ರಜ್ಞ ಓಪನ್ ಹೈಮರ್ ಪಾತ್ರದಲ್ಲಿ ಕಲಿಯನ್ ಮರ್ಫಿ, ಆತನ ಪತ್ನಿಯಾಗಿ ನಟಿ ಎಮಿಲಿ ಬ್ಲಂಟ್, ಹೈಮರ್ ಮುಗಿಸಲು ಸಂಚು ನಡೆಸುವ ಲೂವಿಸ್ ಸ್ಟ್ರಾಸ್ ಪಾತ್ರವನ್ನು ರಾಬರ್ಟ್ ಡೌನಿ ಜೂನಿಯರ್, ಅಣುಬಾಂಬ ಯೋಜನೆಯ ನಿರ್ದೇಶಕನಾಗಿದ್ದ ಲೆಸ್ಲಿ ಗ್ರೋವ್ಸ್ ಪಾತ್ರದಲ್ಲಿ ಮ್ಯಾಟ್ ಡೆಮನ್ ನಟನೆಯನ್ನು ವೀಕ್ಷರು ಹಾಡಿ ಹೊಗಳುತ್ತಿದ್ದಾರೆ. ಜಗತ್ತಿನ ವಿನಾಶಕ ಶಕ್ತಿಯನ್ನು ಕಂಡು ಹಿಡಿದ ಓಪನ್ ಹೈಮರ್ ಸಿನಿಮಾ ಎಲ್ಲರನ್ನು ಸೆಳೆಯುತ್ತಿದೆ.




Leave a Reply

Your email address will not be published. Required fields are marked *

error: Content is protected !!